Saturday, September 21, 2024
ಸುದ್ದಿ

ಪ್ರತಾಪ್ ಸಿಂಹರ ನೇತೃತ್ವದಲ್ಲಿ ಮತ್ತೆ ಹನುಮ ಜಯಂತಿಗೆ ಸಜ್ಜಾದ ಹುಣಸೂರು – ಕಹಳೆ ನ್ಯೂಸ್

 

ಹುಣುಸೂರು : ಕಳೆದ ತಿಂಗಳು ನಡೆಯಬೇಕಿದ್ದ ಹನುಮ ಜಯಂತಿ ಉತ್ಸವ ಈ ಬಾರಿ ಇನ್ನೂ ಅದ್ದೂರಿಯಾಗಿ ನಡೆಯಲಿದೆ. ಕಳೆದ ವರ್ಷ ಡಿ.3 ರಂದು ನಿಂತು ಹೋಗಿದ್ದ ಹನುಮಜಯಂತಿ ಮೆರವಣಿಗೆ ಸಂಬಂಧ ಹನುಮ ಜಯಂತಿ ಆಚರಣಾ ಸಮಿತಿ ಮತ್ತೆ ಆಚರಿಸಲು ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹುಣಸೂರಿನಲ್ಲಿ ಡಿ.03 ರಂದು ಆಯೋಜಿಸಲಾಗಿದ್ದ ಹನುಮಂತ ಜಯಂತ್ಯುತ್ಸವದ ಮೆರವಣಿಗೆಯನ್ನು ಪೊಲೀಸರು ತಡೆದ ಪರಿಣಾಮ ಹನುಮ ಮಾಲಾಧಾರಿಗಳು ಪ್ರತಿಭಟನೆ ನಡೆಸಿ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹನುಮಂತ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರೂ ಭಾಗವಹಿಸಬೇಕಿತ್ತು. ಆದರೆ ಪ್ರತಿಭಟನೆ ಹೆಚ್ಚುತ್ತಿದ್ದಂತೆಯೇ ಪೊಲೀಸರು ಹುಣಸೂರು ಪ್ರವೇಶಿಸುವ ಮುನ್ನವೇ ಮಾಲಾಧಾರಿ ಪ್ರತಾಪ್‌ ಸಿಂಹ ಅವರನ್ನು ವಶಕ್ಕೆ ಪಡೆದಿದ್ದರು. ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲವು ಪ್ರತಿಭಟನಾಕಾರರು ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದ್ದು, ಹನುಮಂತ ಜಯಂತ್ಯುತ್ಸವಕ್ಕಾಗಿ ತೆರಳುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ಬಿಳಿಕೆರೆ ಬಳಿ ಬ್ಯಾರಿಕೇಡ್‌ ಹಾಕಲಾಯಿತು ಇದಕ್ಕೆ ಸಂಸದ ಪ್ರತಾಪ್‌ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್‌ ತಳ್ಳಿಕೊಂಡು ಮುಂದಕ್ಕೆ ಸಾಗಿದ್ದಾರು.

ಜಾಹೀರಾತು

ಈ ಬಾರಿ ಇದೇ ತಿಂಗಳು 27ರ ಶನಿವಾರದಂದು ಶ್ರೀ ಆಂಜನೇಯ ಸ್ವಾಮಿಯ ಭವ್ಯ ಮೆರವಣಿಗೆ ನಡೆಯುವುದು ಎಂದು ಹುಣಸೂರಿನ ಹನುಮಂತೋಸ್ವ ಸಮಿತಿ ಘೋಷಿಸಿದೆ.ರಂಗನಾಥ ಬಡಾವಣೆಯಲ್ಲಿ ಉದ್ಘಾಟನೆಗೊಂಡು ಕಲ್ಕುಣಿಕೆ ವೃತ್ತ, ಶ್ರೀರಾಮ ವೃತ್ತ, ಹಳೇ ಸೇತುವೆ, ಬಸ್ ಸ್ಟ್ಯಾಂಡ್ , ಕಲ್ಪತರು ವೃತ್ತ ಮಾರ್ಗವಾಗಿ ನಂದಿಕಂಬ, ಮಂಗಳವಾದ್ಯ ಹಾಗು ಅನೇಕ ಜಾನಪದ ತಂಡಗಳಿಂದ ಕೂಡಿದ ಮೆರವಣಿಗೆಯು ಮೈಸೂರು ರಸ್ತೆಯ ಆಂಜನೇಯ ಸ್ವಾಮಿಯ ದೇವಸ್ಥಾನ ತಲುಪುವುದು.

ಬಂಧುಗಳೇ ಜಾತಿ ಮತ, ಪಕ್ಷ ಬೇಧ ಮರೆತು ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಶಾಂತಿ ಸೌಹಾರ್ದತೆ, ಭಕ್ತಿ ಭಾವದಿಂದ ಮೆರೆದು ಶಿಸ್ತಿನಿಂದ ಈ ಕಾರ್ಯಕ್ರಮ ಪೂರ್ಣಗೊಳಿಸಬೇಕು ಎಂದು ಹನುಮೋತ್ಸವ ಸಮಿತಿ ಕೇಳಿಕೊಂಡಿದೆ.

ವರದಿ : ಕಹಳೆ ನ್ಯೂಸ್

Leave a Response