ಮಂಗಳೂರು : ಪಡೀಲ್ ಬಳಿಯ ಶಿವನಗರ ಎಂಬಲ್ಲಿ ಮನೆಗೆ ಹೊಂದಿಕೊಂಡಿದ್ದ 20 ಅಡಿ ಎತ್ತರದ ತಡೆಗೋಡೆ ಕುಸಿದು ಬಿದ್ದಿದೆ.
ಪರಿಣಾಮವಾಗಿ ಮನೆಯ ಒಳಗೆ ಓದುತ್ತಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ವೇದಾಂತ್(9) ಮತ್ತು ವರ್ಷಿಣಿ(10) ಮೃತ ಮಕ್ಕಳು ಇವರು ಶಿವನಗರದ ರಾಮಚಂದ್ರ – ರಜನಿ ದಂಪತಿಗಳ ಮಕ್ಕಳು ಪೋಷಕರು ಹೊರಗಿದ್ದ ವೇಳೆ ಮಳೆಯಿಂದ ತಡೆಗೋಡೆ ಕುಸಿದು ಬಿದ್ದಿದೆ. ಮಂಗಳೂರು ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.