ಕಾರವಾರ: ಕಾರವಾರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಲ್ಯಾಟರಲ್ ಎಂಟ್ರಿ” ಮೂಲಕ ಬಿ,ಇ, ಎರಡನೇ ವರ್ಷ ಮೂರನೆಯ ಸೆಮಿಸ್ಟರ್‌ಗಳಿಗೆ 147 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಕುರಿತು ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕಿ ರೂಪಾಲಿ ಎಸ್ ನಾಯ್ಕರವರು ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಉಪಮುಖ್ಯಮಂತ್ರಿ ಅಶ್ವತನಾರಾಯಣರವರಲ್ಲಿ ಮನವಿಯನ್ನು ಸಲ್ಲಿಸಿದ್ದರು.
ಅದಕ್ಕೀಗ ತಾತ್ವಿಕ ಒಪ್ಪಿಗೆ ದೂರೆತಿದ್ದು, ಕಾರವಾರ ಇಂಜಿನಿಯರಿಂಗ್ ಕಾಲೇಜಿಗೆ ಡಿಪ್ಲೊಮಾ ಪೂರ್ಣಗೊಳಿಸಿದ ವಿಧ್ಯಾರ್ಥಿಗಳಿಗೆ ನೇರವಾಗಿ ಇಂಜಿನಿಯರಿಂಗ್ ದ್ವೀತಿಯ ವರ್ಷಕ್ಕೆ “ಲ್ಯಾಟರಲ್ ಎಂಟ್ರಿ” ಮೂಲಕ ಒಟ್ಟು 147 ಸೀಟುಗಳ ಮಂಜೂರಾತಿ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರವಾರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟುಗಳು ಇಲ್ಲದೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿತ್ತು ವಿದ್ಯಾರ್ಥಿಗಳು ಹಾಗೂ ಪಾಲಕರು ಸಮಸ್ಯೆಯನ್ನು ಪರಿಹರಿಸುವಂತೆ ಮಾನ್ಯ ಶಾಸಕಿಯವರ ಹತ್ತಿರ ಮನವಿ ಸಲ್ಲಿಸಲಾಗಿತ್ತು. ಹಾಗಾಗಿ ಶಾಸಕಿ ರೂಪಾಲಿ ಎಸ್,ನಾಯ್ಕ ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಮಂಜುರಾತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.