Wednesday, January 22, 2025
ಸುದ್ದಿ

ಪೊಲೀಸ್ ಇಲಾಖೆಯ ಕಾರ್ಯ ಪ್ರಶಂಸನೀಯ – ಐಜಿಪಿ ಅರುಣ್ ಚಕ್ರವರ್ತಿ – ಕಹಳೆ ನ್ಯೂಸ್

ಬೆಳ್ತಂಗಡಿ: ಸಮಾಜದಲ್ಲಿನ ಹಲವಾರು ಸವಾಲುಗಳ ನಡುವೆಯೂ, ತಾಲೂಕಿನಲ್ಲಿ ಪ್ರಕೃತಿ ವಿಕೋಪ ಸಂದರ್ಭ ಪ್ರಾಣದ ಹಂಗು ತೂರೆದು ಹಲವಾರು ಮಂದಿಯ ಪ್ರಾಣ ರಕ್ಷಿಸಿದ ಪೊಲೀಸ್ ಇಲಾಖೆ ಸಹಿತ ಇತರ ರಕ್ಷಣಾ ಪಡೆಗಳ ಸಿಬ್ಬಂದಿಯ ಸೇವೆ ಅಭಿನಂದನೀಯ ಎಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಹಲವೆಡೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ನಾಗರಿಕರ ಪ್ರಾಣ ರಕ್ಷಣೆಗೆ ನೆರವಾದ ಪೊಲೀಸ್, ಎಎನ್‍ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನುಗೌರವಿಸಿ ಅವರು ಮಾತನಾಡಿದರು. ಬೆಳ್ತಂಗಡಿ, ಧರ್ಮಸ್ಥಳ ಠಾಣಾಧಿಕಾರಿ ಗಳಾದ ರವಿ, ಅವಿನಾಶ್ ಗೌಡ, ಸಿಬ್ಬಂದಿ ಹರೀಶ್ ನಾಯ್ಕ, ದುರ್ಗಾದಾಸ್, ಸವಿತಾ, ಅಶೋಕ, ವೆಂಕಟೇಶ, ರಾಜೇಶ್, ಮುತ್ಯಪ್ಪ, ದೇವಿಪ್ರಸಾದ್, ರವೀಂದ್ರ, ರಾಹುಲ್ ರಾವ್, ಕೃಷ್ಣಪ್ಪ, ಚೌಡಪ್ಪ, ಹರೀಶ್ ಕುಮಾರ್, ಎಎನ್‍ಎಫ್‍ನ ರಾಜೇಶ್, ರಾಮಣ್ಣ ಗೌಡ, ಯತೀಂದ್ರ, ರಘು, ಮುಖ್ಯ ಫೈರ್‍ಮನ್ ಕೃಷ್ಣ ನಾಯಕ್, ಚಾಲಕ ಶಂಕರ, ಫೈರ್‍ಮನ್ ಉಸ್ಮಾನ್ ಅವರನ್ನು ಐಜಿಪಿ ಗೌರವಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಬಂಟ್ವಾಳ ಎಎಸ್‍ಪಿ ಸೈದುಲು ಅಡಾವತ್, ಡಿವೈಎಸ್‍ಪಿ ನಟರಾಜ್ ಉಪಸ್ಥಿತರಿದ್ದರು. ಬೆಳ್ತಂಗಡಿ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಸ್ವಾಗತಿಸಿ, ವಂದಿಸಿದರು. ಮುಖ್ಯ ಪೇದೆ ವೆಂಕಪ್ಪ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು