Sunday, November 24, 2024
ರಾಜಕೀಯ

ಡಿಕೆ ಶಿವಕುಮಾರ್ ಮನವಿಗೆ ಸ್ಪಂದಿಸಿದ ವಿಶೇಷ ಕೋರ್ಟ್; ಇಡಿ ಕಸ್ಟಡಿಯಲ್ಲಿ ಶೇವಿಂಗ್‍ಗೆ ಅನುಮತಿ – ಕಹಳೆ ನ್ಯೂಸ್

ನವದೆಹಲಿ : ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಶೇವಿಂಗ್ ಮಾಡಿಕೊಳ್ಳಲು ನಿರಾಕರಿಸಿದ್ದ ಇಡಿ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಡಿಕೆಶಿ ಪರ ವಕೀಲರು ಇಡಿ ವಿಶೇಷ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಇಂದು ಆ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳು ಡಿಕೆ ಶಿವಕುಮಾರ್ ಅವರಿಗೆ ಶೇವಿಂಗ್ ಮಾಡಿಕೊಳ್ಳಲು ಅಥವಾ ಬೇರೆಯವರಿಂದ ಮಾಡಿಸಿಕೊಳ್ಳಲು ಅನುಮತಿ ನೀಡಿದೆ.

ತಮ್ಮನ್ನು ನೋಡಲು ಬರುವ ಕುಟುಂಬಸ್ಥರ ಭೇಟಿಯ ವೇಳೆ ಇಡಿ ಅಧಿಕಾರಿಗಳು ಇರಬಾರದೆಂದು ಕೋರ್ಟ್‍ನಲ್ಲಿ ಡಿಕೆಶಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಅನುಮತಿ ನಿರಾಕರಿಸಿರುವ ನ್ಯಾಯಮೂರ್ತಿಗಳು ಡಿಕೆ ಶಿವಕುಮಾರ್ ಶೇವಿಂಗ್ ಮಾಡಿಕೊಳ್ಳಲು ಯಾವುದೇ ನಿಬರ್ಂಧವಿಲ್ಲ. ಆದರೆ, ಅವರ ಕುಟುಂಬಸ್ಥರ ಭೇಟಿಗೆ ಮೊದಲಿನಿಂದ ಅರ್ಧ ಗಂಟೆ ಮಾತ್ರ ಅನುಮತಿ ನೀಡಲಾಗುವುದು. ಅವರನ್ನು ಕುಟುಂಬಸ್ಥರು ಭೇಟಿ ಮಾಡುವಾಗ ಇಡಿ ಅಧಿಕಾರಿಗಳು ಇರುವಂತಿಲ್ಲ ಎಂದು 3 ಪುಟಗಳ ಲಿಖಿತ ಆದೇಶ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಗೆ ಪೆನ್ ಮತ್ತು ಪೇಪರ್ ಒದಗಿಸಬೇಕೆಂದು ಕೂಡ ಮನವಿ ಮಾಡಿದ್ದ ಡಿಕೆ ಶಿವಕುಮಾರ್ ಬೇಡಿಕೆ ಬಗ್ಗೆ ಇಡಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳು ಯಾವುದೇ ನಿರ್ದೇಶನ ನೀಡಿಲ್ಲ. ಆದರೆ, ಡಿಕೆಶಿ ಭೇಟಿ ಮಾಡುವ ವಕೀಲರು ಪೆನ್ ಮತ್ತು ಪೇಪರ್ ಬಳಸಬಹುದು ಎಂದು ಸೂಚಿಸಿದ್ದಾರೆ. ಅಲ್ಲಿಗೆ, ಡಿಕೆಶಿ ಅವರ ಬಹುತೇಕ ಎಲ್ಲ ಮನವಿಗಳಿಗೂ ಇಡಿ ಸ್ಪೆಷಲ್ ಕೋರ್ಟ್‍ನಿಂದ ಸಮ್ಮತಿ ಸಿಕ್ಕಂತಾಗಿದೆ. ಈ ಕುರಿತು ನ್ಯಾಯಮೂರ್ತಿಗಳು ಅಧಿಕೃತ ಆದೇಶ ಪ್ರಕಟಿಸಿದ್ದಾರೆ.
ಡಿಕೆಶಿ ಅವರ ಕುಟುಂಬಸ್ಥರು, ವೈದ್ಯರು ಮತ್ತು ವಕೀಲರ ಭೇಟಿ ಸಮಯ ಹೆಚ್ಚಿಸುವಂತೆ ಇಡಿ ವಿಶೇಷ ನ್ಯಾಯಾಲಯಕ್ಕೆ ಡಿಕೆಶಿ ಪರ ವಕೀಲರು ಮನವಿ ಮಾಡಿದ್ದಾರೆ. ಸದ್ಯಕ್ಕೆ ಅರ್ಧ ಗಂಟೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದ್ದು, ಡಿ.ಕೆ. ಶಿವಕುಮಾರ್ ಪರ ವಕೀಲ ಮಯಾಂಕ್ ಜೈನ್ ಹೆಚ್ಚಿನ ಸಮಯಾವಕಾಶಕ್ಕೆ ಬೇಡಿಕೆ ಇಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದ ಹಿನ್ನೆಲೆ:
ಡಿಕೆಶಿಗೆ ಸೇರಿದ ದೆಹಲಿ ನಿವಾಸದಲ್ಲಿ ಸಿಕ್ಕ 8.59 ಕೋಟಿ ರೂ. ಅಕ್ರಮ ಹಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರು. ಅದರಂತೆ ಆ. 30ರಂದು ಡಿಕೆ ಶಿವಕುಮಾರ್ ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸೆ. 3ರಂದು ವಶಕ್ಕೆ ಪಡೆದಿದ್ದರು. ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ನೀಡದೆ ಸಾಮಾನ್ಯನಂತೆ ಇಡಿ ಠಾಣೆಯಲ್ಲಿ ಇರುವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ನಿನ್ನೆ ಅವರ ಕುಟುಂಬಸ್ಥರಿಗೆ ಅನುವು ಮಾಡಿಕೊಡಲಾಗಿತ್ತು. ಈ ನಡುವೆ ತಮಗೆ ಶೇವ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಶುಕ್ರವಾರ ಸಂಜೆ ಡಿಕೆಶಿ ಕೋರಿದ್ದರು. ಆದರೆ, ಇದಕ್ಕೆ ಅಧಿಕಾರಿಗಳು ನಿರಾಕರಿಸಿದ್ದರು. ಹೀಗಾಗಿ ಡಿಕೆಶಿ ಪರ ವಕೀಲರು ಇಡಿ ವಿಶೇಷ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಡಿಕೆ ಶಿವಕುಮಾರ್ ಅವರಿಗೆ ಶೇವ್ ಮಾಡಿಕೊಳ್ಳಲು ಕೋರ್ಟ್ ಸಮ್ಮತಿಸಿದೆ.

ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್ ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.