Wednesday, January 22, 2025
ರಾಜಕೀಯ

ಜಿ.ಟಿ ದೇವಗೌಡ ರಾಜಕೀಯ ನಿವೃತ್ತಿ – ಕಹಳೆ ನ್ಯೂಸ್

ಮೈಸೂರು: ಜಿ.ಟಿ ದೇವಗೌಡ ರಾಜಕೀಯ ನಿವೃತ್ತಿ ಘೋಷಿಸಿದ್ದು ಜೆಡಿಎಸ್ ಪಕ್ಷದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ತನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಹಿರಿಯ ರಾಜಕಾರಣಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಾಮುಂಡೇಶ್ವರಿ ಕ್ಷೇತ್ರವನ್ನು ಭದ್ರ ಕೊಟೆಯನ್ನಾಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒಂದು ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಸೋಲಿಸಿದ ಹೆಗ್ಗಳಿಕೆ ಇವರದ್ದು. ಇತ್ತೀಚಿಗೆ ಇವರ ಹೇಳಿಕೆಗಳು ನೋಡುವಾಗ ಇವರು ಬಿಜೆಪಿಗೆ ವಾಲಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ, ಇದಕ್ಕೆ ಪುಷ್ಟಿ ಎಂಬಂತೆ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಮತಗಳು ಬಿಜೆಪಿಗೆ ಬಿದ್ದಿವೆ ಎಂದು ಬಹಿರಂಗ ಹೇಳಿಕೆ ಕೂಟ್ಟಿದ್ದರು. ಇದಲ್ಲದೆ ಮೈತ್ರಿ ಸರ್ಕಾರ ಬೀಳಿಸಲು ಮೋದಿ, ಶಾ ಪ್ರಯತ್ನಿಸಿಲ್ಲ ಎಂಬ ಅಚ್ಚರಿ ಹೇಳಿಕೆ ಕೂಟ್ಟಿದ್ದರಲ್ಲದೆ, ಮೋದಿ ಆಡಳಿತವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದರು. ಇವರ ರಾಜಕೀಯ ನಿವೃತ್ತಿಯಿಂದ 2022ರ ವಿಧಾನ ಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪರ್ಯಾಯ ನಾಯಕನೇ ಇಲ್ಲದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು