Wednesday, January 22, 2025
ಸುದ್ದಿ

ನೆಕ್ಕಿಲಾಡಿಯಲ್ಲಿ ಜೇಸಿ ಸಪ್ತಾಹ ಹಾಗೂ ಮಾದರಿ ಕೃಷಿಕ ದಾಸಪ್ಪ ಗೌಡ ಕೊಡ್ಯಡ್ಕ ಇವರಿಗೆ ಸನ್ಮಾನ – ಕಹಳೆ ನ್ಯೂಸ್

ಜೆಸಿಐ ನೆಕ್ಕಿಲಾಡಿ ಘಟಕದ ಜೆಸಿಗಳ ಹಬ್ಬ ಜೇಸಿ ಸಪ್ತಾಹ ಕಾರ್ಯಕ್ರಮ ಹಾಗೂ ಎರಡನೇ ವರ್ಷದ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆಯನ್ನು ಊರ ಪರವೂರ ಭಕ್ತಾಭಿಮಾನಿಗಳ ಜೇಸಿ ಬಂಧುಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನೆರವೇರಿಸುವುದರ ಮೂಲಕ ಜೇಸಿ ಸಪ್ತಾಹ ಕಾರ್ಯಕ್ರಮವನ್ನು 15ರ ವಲಯಾಧ್ಯಕ್ಷ ಅಶೋಕ್ ಚೂಂತಾರು ಇವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜೈ ಜವಾನ್ ಜೈ ಕಿಸಾನ್ ವಲಯ ಅಧ್ಯಕ್ಷರ ಕನಸಿನ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ದಾಸಪ್ಪ ಗೌಡ ಕೊಡ್ಯಡ್ಕ ಹಾಗೂ ಯೋಧ ಪ್ರಕಾಶ್ ಪಿಬಿ.ಕೆ. ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷ ರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ವಲಯ ಉಪಾಧ್ಯಕ್ಷ ದಾಮೋದರ ಪಾಟಾಳಿ, ವಲಯ 15ರ ಆಡಳಿತ ವಿಭಾಗದ ನಿರ್ದೇಶಕರಾದ ಪ್ರಶಾಂತ್ ಕುಮಾರ್ ರೈ, ವಲಯಾಧಿಕಾರಿ ಪ್ರದೀಪ್ ಬಾಕಿಲ, ಜೆಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಬಾರಿತ್ತಾಯ, ಸದಸ್ಯರಾದ ಜೇಸಿ ಗೌತಮ್ ಕೆ ಎಸ್, ಜೆಸಿ ನಿಖಿಲ್ ರಾಜ್, ಜೇಸಿ ದುರ್ಗರಾಜ್, ಕಾರ್ಯದರ್ಶಿ ಜೇಸಿ ರಮೇಶ್ ಸುಭಾಷ್ ನಗರ, ಗಣ್ಯರಾದ ಹರೀಶ್ ಉಪಾಧ್ಯಾಯ, ಗೋಪಾಲ್ ಹೆಗ್ಡೆ, ಚಿದಾನಂದ ನಾಯಕ್, ಜಗದೀಶ್ ಶೆಟ್ಟಿ, ಹರೀಶ್ ನಟ್ಟಿಬೈಲ್, ಜಯಪ್ರಕಾಶ್ ಶೆಟ್ಟಿ, ಜೇಸಿ ಮೋನಪ್ಪ ಗೌಡ ಜೇಸಿ ಹೇಮಲತಾ ಬಾಕಿಲ, ಸುಧಾಕರ್ ಶೆಟ್ಟಿ ಗಾಂಧಿ ಪಾರ್ಕ್, ರವೀಶ್ ಎಚ್ ಟಿ, ರಾಮಚಂದ್ರ ಮಣಿಯಾಣಿ, ಕಾಮಾಕ್ಷಿ ಹೆಗ್ಡೆ, ವಸುದಾ ಉಪಾಧ್ಯಾಯ, ಹಾಗೂ ಇತರರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು