Recent Posts

Tuesday, January 21, 2025
ಸುದ್ದಿ

ಭಾರತ ಸೇನೆಗೆ ಮತ್ತಷ್ಟು ಬಲ – ಕಹಳೆ ನ್ಯೂಸ್

ಹೊಸದಿಲ್ಲಿ: ದಿನದಿಂದ ದಿನಕ್ಕೆ ನೆರೆಯ ಪಾಕಿಸ್ಥಾನದ ಉಪಟಳ ಹಿನ್ನಲೆಯಲ್ಲಿ, ಕೇಂದ್ರ ಸರಕಾರವು ಸೇನೆಯ ಆಧುನೀಕರಣಕ್ಕೆ ಮುಂದಾಗಿದ್ದು, ಮುಂದಿನ 5 ವರ್ಷಗಳಲ್ಲಿ 9.32 ಲಕ್ಷ ಕೋಟಿ ರೂ. ವ್ಯಯಿಸುವ ಯೋಜನೆ ಹಾಕಿಕೂಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ಈ ಬಗ್ಗೆ ಸುಳಿವು ನೀಡಿದ್ದು, ಭಾರತ ಸೇನೆಯನ್ನು ಸಧೃಡಗೂಳಿಸುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ. ಭಾರತೀಯ ಸೇನೆಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ಆಧುನೀಕರಣ ಮಾಡಲಾಗುತ್ತದೆ. ನೂತನ ಮಾದರಿಯ ಆಯುಧಗಳು, ಕ್ಷಿಪಣಿಗಳು, ಯುದ್ಧ ವಿಮಾನಗಳು, ಸಬ್‍ಮೆರಿನ್‍ಗಳು ಮತ್ತು ಸಮರ ನೌಕೆಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಸೇನೆಯ ಆಧುನೀಕರಣವನ್ನು ತ್ವರಿತಗೂಳಿಸುವ ನಿಟ್ಟಿನಲ್ಲಿ ಭೂಸೇನೆಗಾಗಿ 2,600 ಸಮರ ವಾಹನಗಳು, ಭವಿಷ್ಯದ ಉದ್ದೇಶಕ್ಕಾಗಿ 1,700 ಸಮರ ವಾಹನಗಳನ್ನು ಖರೀದಿಸಲು ನಿರ್ಣಯಿಸಿದೆ. ಜತೆಗೆ ವಾಯುಪಡೆಗಾಗಿ 110 ಬಹು ಉದ್ದೇಶಿತ ಯುದ್ದ ವಿಮಾನಗಳನ್ನೂ ಖರೀದಿಸಲಾಗುತ್ತದೆ. ನೌಕಾಪಡೆಗಾಗಿ 200 ಸಮರನೌಕೆಗಳು, 500 ಯುದ್ಧ ವಿಮಾನಗಳು, 24 ದಾಳಿ ಉದ್ದೇಶದ ಜಲಾಂತರ್ಗಾಮಿಗಳನ್ನು ಮುಂದಿನ 3-4 ವರ್ಷಗಳಲ್ಲಿ ಖರೀದಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು