Monday, January 20, 2025
ಸುದ್ದಿ

ಗುತ್ತಿಗೆ ನೌಕರಿಂದ ಮುಷ್ಕರಕ್ಕೆ ಕರೆ – ಕಹಳೆ ನ್ಯೂಸ್

ಮಂಗಳೂರು: ಬಿಎಸ್‍ಎನ್‍ಎಲ್‍ನಲ್ಲಿ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ದಿನಗೂಲಿ ಸೇರಿದಂತೆ, ವಿವಿಧ ನೌಕರರಿಗೆ 9 ತಿಂಗಳಿನಿಂದ ವೇತನ ಪಾವತಿಯಾಗದಿದ್ದು, 15 ದಿನಗಳ ಒಳಗೆ ಪಾವತಿಸದಿದ್ದಲ್ಲಿ ಬಿಎಸ್‍ಎನ್‍ಎಲ್‍ನ ಬೆಂಗಳೂರು ಸಿಜಿಎಂ ಕಚೇರಿ ಮುಂದೆ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಬಿಎಸ್‍ಎನ್‍ಎಲ್ ಕಂಟ್ರಾಕ್ಟರ್ ವರ್ಕರ್ ಅಸೋಸಿಯೇಶನ್ ತಿಳಿಸಿದೆ. ಮಂಗಳೂರಿನಲ್ಲಿ ಸೋಮವಾರ ನಡೆದ ಅಸೋಸಿಯೇಶನ್ ಸಭೆಯಲ್ಲಿ ಅಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ, ಸಂಸದರು, ಶಾಸಕರು ಸೇರಿದಂತೆ ಎಲ್ಲರಿಗೂ ಮನವಿ ಮಾಡಿದರೂ ಯಾವುದೇ ಪ್ರತಿಫಲ ದೂರೆತಿಲ್ಲ. ಸತ್ಯಾಗ್ರಹದ ಬಳಿಕ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು