Monday, January 20, 2025
ಸುದ್ದಿ

ಶಿವಮೊಗ್ಗದಿಂದ ಚೆನೈ, ತಿರುಪತಿಗೆ ಶೀಘ್ರ ರೈಲು ಸಂಚಾರ – ಕಹಳೆ ನ್ಯೂಸ್

ಶಿವಮೊಗ್ಗ: ಶಿವಮೊಗ್ಗದಿಂದ ಚೆನೈ ಮತ್ತು ತಿರುಪತಿಗೆ ರೈಲು ಸಂಚಾರ ಆರಂಭಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು, ರೈಲು ಸೇವೆ ಒದಗಿಸಿಕೊಡುವಂತೆ ಮನವಿ ಮಾಡಿದ್ದರು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ ಕೆ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ಕೆ ವರ್ಮ, ಕೆ-ರೈಡ್ ವ್ಯವಸ್ಥಾಪಕ ಸಂಪಾದಕ ಅಮಿತ್ ಗಾರ್ಗ್, ಮುಖ್ಯ ಆಡಳಿತಾತ್ಮಕ ಅಧಿಕಾರಿ ಕೆ.ಸಿ ಸ್ವಾಮಿ ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಹಾಜರಿದ್ದರು. ಸಿಎಂ ಜೊತೆಗೆ ಸುಮಾರು 50 ನಿಮಿಷಗಳ ಕಾಲ ಸಂವಾದ ನಡೆಸಿದ ನಂತರ ಕೇಂದ್ರ ಸಚಿವ ಸುರೇಶ್ ಅಂಗಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಈಗಿರುವ ಶಿವಮೊಗ್ಗ-ಬೆಂಗಳೂರು ರೈಲನ್ನು ಚೆನೈಯವರೆಗೆ ಮುಂದುವರಿಸಲು ಮತ್ತು ಹೊಸ ರೈಲನ್ನು ಶಿವಮೊಗ್ಗದಿಂದ ತಿರುಪತಿಗೆ ಸಂಚರಿಸುವಂತೆ ಮಾಡಲಾಗುವುದು. ತಿರುಪತಿ ಮತ್ತು ಚೆನೈಗೆ ಶಿವಮೊಗ್ಗದಿಂದ ಇನ್ನೂ ರೈಲು ಸಂಚಾರ ಆರಂಭಗೊಂಡಿಲ್ಲ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು