ಮಂಗಳೂರು : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಪ್ರಚೋದನಾಕಾರಿ ಭಾಷಣಗಳ ವಿರುದ್ಧವಾಗಿ ಜೆ.ಡಿ.ಎಸ್. ನ ಮುಖಂಡ ಇಬ್ರಾಹಿಮ್ ಗೋಳಿಕಟ್ಟೆ ಸಿಡಿದೆದ್ದಿದ್ದಾರೆ.
ಸಾಮಾಜಿಕ ಪ್ರಜ್ಞೆ ಇಲ್ಲದೆ ಧರ್ಮ ಧರ್ಮದ ನಡುವೆ ಸಂಘರ್ಷ ತರಿಸುವುದೇ ಇವರ ಕೌಶಲ್ಯಾಭಿವೃದ್ಧಿಯೇ? ಎಂದು ಪ್ರಶ್ನಿಸಿದ ಅವರು ಹೆಗಡೆಯವರು ಸಂವಿಧಾನವನ್ನು ಬದಲಾಯಿಸಲು ಹೊಟ್ಟಿದ್ದಾರೆ, ಅವರು ನೆನಪುಮಾಡಿಕೊಳ್ಳಲಿ ಅದೇ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅವರು ಅಧಿಕಾರಕ್ಕೆ ಬಂದದ್ದು, ಎಂದು ಹರಿಹಾದಿದ್ದಾರೆ.
ತಾನು ಒಬ್ಬ ಸಂಸದ, ಕೇಂದ್ರ ಸಚಿವ ಎಂಬುವುದನ್ನು ಮರೆತು ಕಮಾಲೆ ಕಣ್ಣಿನವರಂತೆ ವರ್ತಿಸುತ್ತಿದ್ದಾರೆ. ಅವರು ಕೇವಲ ಒಂದು ವರ್ಗಕ್ಕೆ ಮಾತ್ರ ಸಚಿವರೇ ಎಂದು ಪ್ರಶ್ನಿಸಿದ್ದಾರೆ. ಬಾಯಿ ಬಿಟ್ಟರೆ ಸ್ವಚ್ಛಭಾರತ ಎನ್ನುವ ಬಿ.ಜೆ.ಪಿ. ಯವರು ಎಷ್ಟರ ಮಟ್ಟಿಗೆ ಸ್ವಚ್ಛತೆಯ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಅದೇ, ನಗರ ಸಭೆಯ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಂಡವರು ದಲಿತರು, ಈ ಬಿ.ಜೆ.ಪಿ. ಯವರು ಅವರ ವಿರುದ್ದವೇ ಮಾತನಾಡುತ್ತಾರೆ ಇವರದ್ದು ಯಾವ ರೀತಿಯ ಸ್ವಚ್ಛತೆ ಎಂದು ಪ್ರಶ್ನಿಸಿದ್ದಾರೆ.
ವರದಿ : ಕಹಳೆ ನ್ಯೂಸ್