Monday, January 20, 2025
ಸುದ್ದಿ

ಕೇವಲ ಐದೇ ದಿನಗಳಲ್ಲಿ ದಾಖಲೆ ಪ್ರಮಾಣದ ದಂಡ ವಸೂಲಿ ಮಾಡಿದ ಬೆಂಗಳೂರು ಪೊಲೀಸರು – ಕಹಳೆ ನ್ಯೂಸ್

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಮೋಟಾರ್ ಕಾಯ್ದೆ ಅನುಷ್ಠಾನದ ನಂತರ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುತ್ತಿದ್ದು, ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 7 ಸಾವಿರ ಪ್ರಕರಣಗಳಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಹೊಸ ಮೋಟಾರ್ ಕಾಯ್ದೆ ಜಾರಿಗೆ ಬಂದ ಕ್ಷಣದಿಂದಲೇ ತೀವ್ರ ತಪಾಸಣೆ ನಡೆಸಿರುವ ಟ್ರಾಫಿಕ್ ಪೊಲೀಸರು ಹೊಸ ಕಾಯ್ದೆ ಅಡಿ ಭರ್ಜರಿ ದಂಡವಿಧಿಸುತ್ತಿದ್ದು, ಕೇವಲ 5 ದಿನಗಳ ಅವಧಿಯಲ್ಲಿ ಲಕ್ಷ ಲಕ್ಷ ದಂಡ ವಸೂಲಿ ಮಾಡಲಾಗಿದೆ. ಭರ್ಜರಿ ದಂಡಗಳ ಹೊರತಾಗಿಯೂ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ ರೂ.72.5 ಲಕ್ಷ ದಂಡ ವಸೂಲಿ ಮಾಡಲಾಗಿದ್ದು, ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ವಾಹನ ಸವಾರರು ಹೊಸ ದಂಡದ ಮೊತ್ತ ನೋಡಿ ಶಾಕ್ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋಟಾರ್ ವೆಹಿಕಲ್ ಕಾಯ್ದೆಯಲ್ಲಿ ಕೆಲವು ಮಹತ್ವದ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ಕೆಲವು ಪ್ರಕರಣಗಳ ಮೇಲೆ ಗರಿಷ್ಠ ಪ್ರಮಾಣದ ದಂಡಗಳನ್ನು ವಿಧಿಸಲಾಗಿದೆ. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸುವಂತ ಪರಿಸ್ಥಿತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ ಮಾತ್ರವಲ್ಲದೇ ದೇಶದ ವಿವಿಧ ನಗರಗಳಲ್ಲೂ ದೊಡ್ಡ ಮೊತ್ತದ ದಂಡ ಸಂಗ್ರಹ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಲಾರಿ ಚಾಲಕರಿಂದ ಮತ್ತು ಕಾರು ಮಾಲೀಕರಿಂದ ರೂ.70 ಸಾವಿರದಿಂದ 80 ಸಾವಿರದಷ್ಟು ದಂಡ ವಿಧಿಸಲಾಗಿದೆ. ಇನ್ನು ನಿಯಮ ಹೊಸ ಜಾರಿ ನಂತರ ಕೆಲವು ವಾಹನ ಸವಾರರಲ್ಲಿ ಗೊಂದಲಗಳು ಆರಂಭವಾಗಿದ್ದು, ವಾಹನಗಳಿಗೆ ಸಂಬಂಧಿಸಿದ ಮೂಲಪ್ರತಿಗಳನ್ನು ಚಾಲನೆ ವೇಳೆ ಕಡ್ಡಾಯವಾಗಿ ಹೊಂದಿರಬೇಕೆ ಎನ್ನುವ ಪ್ರಶ್ನೆಗೆ ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ವಾಹನ ಚಾಲನೆ ವೇಳೆ ಈ ಹಿಂದೆ ಡಿಎಲ್, ಆರ್‍ ಸಿ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನೇ ಹೊಂದಿರಬೇಕೆಂಬ ನಿಯಮವಿತ್ತು. ಆದರೆ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಡಿ ಪರಿಚಯಿಸಿರುವ ಡಿಜಿ ಲಾಕರ್ ಆಪ್‍ನಲ್ಲಿಯೇ ನಿಮ್ಮ ವಾಹನಗಳ ದಾಖಲೆಗಳನ್ನು ಹೊಂದಿರಲು ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ವಾಹನ ಸವಾರರು ಡಿಜಿ ಲಾಕರ್ ಹೊಂದಿದ್ದರೆ ದಾಖಲೆಗಳು ಮೂಲ ಪ್ರತಿಯನ್ನೇ ಹೊಂದಿರಬೇಕಿಲ್ಲವೆಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದು, ಮೂಲಪ್ರತಿ ಇಲ್ಲವೆಂದು ದಂಡ ಹಾಕಿಕೊಳ್ಳುವ ತೊಂದರೆ ತಪ್ಪಲಿದೆ.

ಬಹುತೇಕ ವಾಹನ ಸವಾರರಲ್ಲಿ ಮನಸ್ಸಿನಲ್ಲಿ ಡಿಎಲ್ ಮತ್ತು ಆರ್‍ ಸಿ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನೇ ಹೊಂದಿರಬೇಕು ಇಲ್ಲವಾದರೆ ದಂಡವಿಧಿಸುತ್ತಾರೆ ಎನ್ನುವ ಮಾಹಿತಿ ಇದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಾಫಿಕ್ ಪೊಲೀಸರು ಡಿಎಲ್ ಮತ್ತು ಆರ್‍ಸಿ ಹೊರತುಪಡಿಸಿ ವಿಮಾ ಪತ್ರವನ್ನು ಮಾತ್ರವೇ ಮೂಲಪ್ರತಿಯಲ್ಲಿರಬೇಕು ಎಂದಿದ್ದಾರೆ. ಡಿಜಿ ಲಾಕರ್ ಅಥವಾ ಎಮ್‍ಪರಿವಾಹನ್ ಆಪ್‍ನಲ್ಲಿ ವಾಹನ ದಾಖಲೆಗಳನ್ನು ಸಂಗ್ರಹಣೆ ಮಾಡಬಹುದಾಗಿದ್ದು, ಮೋಟಾರ್ ವೆಹಿಕಲ್ ಕಾಯ್ದೆ 1988ರ ಪ್ರಕಾರ ವಾಹನ ತಪಾಸಣೆ ವೇಳೆ ಡಿಜಿ ಲಾಕರ್ ಅಥವಾ ಎಮ್‍ಪರಿವಾಹನ್ ಆಪ್ ಮೂಲಕವೂ ವಾಹನ ದಾಖಲೆಗಳನ್ನು ಮಾನ್ಯತೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.

ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ಕೆಲವು ಪ್ರಕರಣಗಳ ಮೇಲೆ ಗರಿಷ್ಠ ಪ್ರಮಾಣದ ದಂಡಗಳನ್ನು ವಿಧಿಸಲಾಗಿದೆ. ಅಧಿಕೃತವಾಗಿ ಚಾಲನಾ ಪರವಾನಿಗೆ ಪಡೆಯದೇ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಲೆಸೆನ್ಸ್ ಹೊಂದದೇ ವಾಹನ ಚಾಲನೆಗೆ ಮುಂದಾದರೆ ರೂ.5 ಸಾವಿರ ದಂಡ ವಿಧಿಸಲಾಗುತ್ತಿದ್ದು, ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡುವ ಪೋಷಕರಿಗೂ ಭರ್ಜರಿ ದಂಡವನ್ನು ವಿಧಿಸಲಾಗುತ್ತಿದೆ.

ಹಾಗೆಯೇ ಹೆಲ್ಮೆಟ್ ರಹಿತ ಬೈಕ್ ಸವಾರಿ, ತ್ರಿಬಲ್ ರೈಡಿಂಗ್, ಕಾನೂನು ಬಾಹಿರವಾಗಿ ವಾಹನಗಳನ್ನು ಮಾಡಿಫೈ ಮಾಡುವುದು, ಚಾಲನೆ ವೇಳೆ ಇಯರ್ ಫೋನ್ ಬಳಕೆ ಮತ್ತು ಫುಟ್‍ಪಾತ್‍ಗಳ ಮೇಲೆ ವಾಹನಗಳ ಚಾಲನೆ ಸೇರಿದಂತೆ ವಿವಿಧ ಮಾದರಿಯ ಸಂಚಾರಿ ನಿಯಮ ಉಲ್ಲಂಘನೆಗಳ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ನೀವು ಕೂಡಾ ಸಂಚಾರಿ ನಿಯಮಗಳನ್ನು ಮೀರಿ ದಂಡಕ್ಕೆ ಗುರಿಯಾಗಬೇಡಿ.