Tuesday, January 21, 2025
ಸುದ್ದಿ

ಮೋಟಾರ್ ಕಾಯ್ದೆ ಪಾಲಿಸುವಂತೆ ಮನವಿ – ಕಹಳೆ ನ್ಯೂಸ್

ಮಂಗಳೂರು : ರಾಜ್ಯದಲ್ಲಿ ಜಾರಿಗೆ ಬಂದಿರುವ, ಮೋಟರ್ ಕಾಯ್ದೆ ಬಗ್ಗೆ ಇದೇ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಪ್ರತಿಕ್ರಿಯಿಸಿದ್ದಾರೆ. ಜಾರಿಗೆ ಬಂದಿರುವ ನಿಯಮಗಳನ್ನು, ಪಾಲಿಸುವಂತೆ ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಸಂಚಾರಿ ನಿಯಮಾನುಸಾರ ಈಗಾಗಲೇ, ಪರಿಷ್ಕೃತ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ಬೀಳಲಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆಯನ್ನು, ಅಧಿಕೃತವಾಗಿ ರಾಜ್ಯ ಸರ್ಕಾರ ಜಾರಿ ಮಾಡಿದೆ. ಈಗಾಗಲೇ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು, ವಾಹನ ಸವಾರರು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ, ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟು, ಇಂದಿನಿಂದ ಎಲ್ಲೆಡೆ ದಂಡ ಹಾಕಲಿದ್ದಾರೆ. ನೂತನ ಕಾಯ್ದೆ ಪ್ರಕಾರ, ಆಂಬುಲೆನ್ಸ್ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ, 10,000 ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಡಾ.ಪಿ.ಎಸ್.ಹರ್ಷ ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು