Tuesday, January 21, 2025
ಸುದ್ದಿ

ನೀರಿನ ಬಿಲ್‍ವಸೂಲಿ ಮಾಡುವಂತೆ ಸೆ.16 ವರೆಗೆ ಗಡುವು – ಕಹಳೆ ನ್ಯೂಸ್

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ, ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್ ಬರಲು ಬಾಕಿಯಿದೆ. ಆದರೆ ಬಿಲ್ ವಸೂಲಿಗಾರರು ನೀಡುತ್ತಿರುವ ನೀರಿನ ಬಿಲ್ ಬಾಕಿ ಪಟ್ಟಿಗೂ, ಇಲ್ಲಿನ ಮುಖ್ಯ ಕಡತದಲ್ಲಿರುವ ಅಂಕಿಅಂಶಕ್ಕೂ ತಾಳೆಯಾಗುತ್ತಿಲ್ಲ ಎನ್ನುವ ವಿಷಯವನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಹಿರಂಗಪಡಿಸಿದ ಘಟನೆ 34ನೇ ನೆಕ್ಕಿಲಾಡಿಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ, ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ತಸ್ತಾವಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, 2018-19ನೇ ಸಾಲಿನಲ್ಲಿ ಸುಮಾರು 3 ಲಕ್ಷ ರೂ.ಗೂ ಅಧಿಕ ನೀರಿನ ಬಿಲ್ ಗ್ರಾ.ಪಂ.ಗೆ ಬರಲು ಬಾಕಿ ಇತ್ತು. ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯರು, ಕುಡಿಯುವ ನೀರಿನ ಬಿಲ್ ಪಾವತಿಸದಿದ್ದರೆ ಗ್ರಾ.ಪಂ. ಆದಾಯಕ್ಕೆ ಪೆಟ್ಟು ಬೀಳುತ್ತದೆ. ಪಿ.ಡಿ.ಓ ಜಯಪ್ರಕಾಶ್ ಮಾತನಾಡಿ ಸೆ.16ರವರೆಗೆ ಗಡುವು ವಿಧಿಸಲಾಗಿದೆ. ಕುಡಿಯುವ ನೀರಿನ ಬಿಲ್ ಪಾವತಿಸದವರ ಬಗ್ಗೆ ಯಾವುದೇ ಮುಲಾಜು ಬೇಡ. ಅಂತಹವರ ನಳ್ಳಿ ಸಂಪರ್ಕ ಕಡಿತಕ್ಕೆ ಆದೇಶಿಸಲಾಗಿದೆ. ಹಾಗೆಯೇ ತಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಬೇಡಿಕೆ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು