Tuesday, January 21, 2025
ಸುದ್ದಿ

ಪಣೋಲಿ ಬೈಲಿನ ವ್ಯಕ್ತಿ ನಾಪತ್ತೆ ಠಾಣೆಯಲ್ಲಿ ಪ್ರಕರಣ ದಾಖಲು – ಕಹಳೆ ನ್ಯೂಸ್

ಬಂಟ್ವಾಳ: ಪಣೋಲಿಬೈಲಿನ ನಿವಾಸಿ ವಿಠ್ಠಲ ಪೂಜಾರಿ (45) ವಯಸ್ಸಿನ ವ್ಯಕ್ತಿ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ, ಪ್ರಕರಣ ದಾಖಲಾಗಿದೆ.

ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಮಲಗಿದ ವಿಠಲ ಪೂಜಾರಿ ಬೆಳಗ್ಗಿನ ಜಾವ, ಮನೆಯಿಂದ ಕಾಣೆಯಾಗಿದ್ದಾರೆಂದು, ಅವರ ಪತ್ನಿ ಶಾಲಿನಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುಂಜಾನೆ ಸುಮಾರು ಮೂರು ಗಂಟೆಯ ವೇಳೆ ಕಾರಾಜೆ ಪರಿಸರದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ, ಸ್ಥಳೀಯ ಮೀನು ಮಾರಾಟ ಮಾಡುವ ವ್ಯಕ್ತಿಯೋರ್ವರು ಈತನನ್ನು ಕಂಡು ಪೋಲೀಸರಿಗೆ ತಿಳಿಸಿದ್ದಾರೆ. ಕೆಂಪು ಬಣ್ಣದ ಅಂಗಿ ಮತ್ತು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕವರು ಬಂಟ್ವಾಳ ನಗರ ಠಾಣೆಗೆ ಅಥವಾ 9731530124 ಈ ಸಂಖ್ಯೆಗೆ ತಕ್ಷಣ ಮಾಹಿತಿ ನೀಡಬೇಕಾಗಿ ವಿನಂತಿಸಿಕೂಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು