Recent Posts

Tuesday, January 21, 2025
ಸುದ್ದಿ

ಇಸ್ರೋ ಸಿಬ್ಬಂದಿ ವೇತನ ಹೆಚ್ಚಳ ಆದೇಶ ವಾಪಸ್ ಪಡೆದ ಕೇಂದ್ರ..! ; ಹಲವಾರು ಅನುಮಾನಗಳಿಗೆ ವೇದಿಕೆ ನಿರ್ಮಿಸಿದ ಮೋದಿ ನಡೆ – ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ಸರ್ಕಾರ ಇಸ್ರೋ ವಿಜ್ಞಾನಿಗಳು ಹಾಗೂ ಇಂಜಿನಿಯರ್‍ ಗಳ ಹೆಚ್ಚುವರಿ ವೇತನ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

ಇಸ್ರೋದ ಹಿರಿಯ ಸಿಬ್ಬಂದಿಗಳ, ಇನ್‍ಕ್ರಿಮೆಂಟ್ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಜೂನ್ 12ರಂದು ಬಾಹ್ಯಾಕಾಶ ಇಲಾಖೆಯ ಅಧೀನ ಕಾರ್ಯದರ್ಶಿ ಎಂ ರಾಮದಾಸ್ ಹೊರಡಿಸಿರುವ ಆದೇಶದನ್ವಯ, ಎಸ್‍ಡಿ, ಎಸ್‍ಇ, ಎಸ್‍ಎಫ್ ಮತ್ತು ಎಸ್‍ಜಿ ದರ್ಜೆಯ ವಿಜ್ಞಾನಿಗಳು/ಇಂಜಿನಿಯರ್‍ ಗಳಿಗೆ ನೀಡಲಾಗಿದ್ದ, ಹೆಚ್ಚುವರಿ ವೇತನವನ್ನು ಜುಲೈ 1, 2019ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿಕೆ ನೀಡಿದ್ದಾರೆ