ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಕ್ರಮವನ್ನು ಖಂಡಿಸಿ ಇಂದು ಒಕ್ಕಲಿಗರ ಸಂಘಗಳ ಒಕ್ಕೂಟ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಸುಮಾರು 5.2 ಕಿ.ಮೀ ದೂರ ಈ ಮೆರವಣಿಗೆ ಸಾಗಲಿದೆ. ಪ್ರತಿಭಟನೆಯಲ್ಲಿ 30ರಿಂದ 35 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ.
ನ್ಯಾಷನಲ್ ಕಾಲೇಜು ಮೈದಾನಕ್ಕೆ ಹರಿದು ಬರ್ತಿರುವ ಒಕ್ಕಲಿಗ ಸಮುದಾಯ. ನ್ಯಾಷನಲ್ ಕಾಲೇಜ್ ಮೈದಾನದ ತುಂಬಾ ಜನವೋ ಜನ. ನ್ಯಾಷನಲ್ ಕಾಲೇಜು ಮೈದಾನದತ್ತ ಅಗಮಿಸುತ್ತಿರುವ ಒಕ್ಕಲಿಗ ಸಂಘ ಸಂಸ್ಥೆಗಳ ಮುಖಂಡರು. ಬೇರೆ ಬೇರೆ ಊರುಗಳಿಂದ ಪ್ರತಿಭಟನೆಗೆ ಅಗಮಿಸುತ್ತಿರುವ ಡಿಕೆಶಿ ಬೆಂಬಲಿಗರು. ನ್ಯಾಷನಲ್ ಕಾಲೇಜು ಮೈದಾನಕ್ಕೆ ಚೆಲುವರಾಯ ಸ್ವಾಮಿ ಮತ್ತು ಬಾಲಕೃಷ್ಣ ಆಗಮನ.. ಬ್ಯಾರಿಕೇಡ್ ಹಾಕಿ ಚೆಲುವರಾಯ ಸ್ವಾಮಿ ಕಾರು ಒಳ ಬಿಡದ ಪೊಲೀಸರು .. ಪೊಲೀಸರಿಗೆ ಕಾರು ಒಳ ಬಿಡುವಂತೆ ಇನ್ಸ್‍ಪೆಕ್ಟರ್ ಕರೆದ ಬಾಲಕೃಷ್ಣ.. ನಂತರ ಬ್ಯಾರಿಕೇಡ್ ತೆಗೆದು ಕಾರು ಕಳಿಸಿದ ಪೊಲೀಸರು.. ನ್ಯಾಷನಲ್ ಕಾಲೇಜು ಮೈದಾನಕ್ಕೆ ತಂಡೋಪತಂಡವಾಗಿ ಆಗಮಿಸ್ತಿರೋ ಡಿಕೆಶಿ ಬೆಂಬಲಿಗರು. ರಾಮನಗರದಿಂದ ಬಸ್ ಗಳಲ್ಲಿ ಬರ್ತಿರೋ ಜನ.. ಐಟಿ, ಇಡಿ, ಸಿಬಿಐ ದುರ್ಬಳಕೆ ಕುರಿತು ಕೇಂದ್ರದ ವಿರುದ್ಧ ಆಕ್ರೋಶ. ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ. ಪ್ರತಿಭಟನೆಗೆ ಅಗಮಿಸುತ್ತಿರುವ ಒಕ್ಕಲಿಗ ಮುಖಂಡರು, ರಾಜ್ಯದ ವಿವಿಧೆಡೆಯಿಂದ ಆಗಮಿಸ್ತಿರುವ ಜನ.. ಬೆಂಗಳೂರಿನಲ್ಲಿ ಸೇರಲಿದ್ದಾರೆ 40 ಸಾವಿರ ಜನ.. ಭಾರೀ ಪ್ರತಿಭಟನೆಗೆ ಸ್ತಬ್ಧ ಆಗಲಿದೆ ಬೆಂಗಳೂರು.. ಗಾಂಧಿ ಟೋಪಿ ರೀತಿ ಡಿಕೆಎಸ್ ಎಂದು ಬಿಳಿ ಟೋಪಿ ಧರಿಸಿರುವ ಬೆಂಬಲಿಗರು. ಡಿಕೆಶಿ ಬೆಂಬಲಿಗರಿಂದ ಟೋಪಿ ಧರಿಸಿ ಪ್ರತಿಭಟನೆಗೆ ಆಗಮನ.
ಒಕ್ಕಲಿಗರ ಪ್ರತಿಭಟನೆಗೆ ಕಾರಣ?
ಬಿಜೆಪಿ ವಿರುದ್ಧ ಒಕ್ಕಲಿಗರನ್ನು ಸಿಡಿದೇಳುವಂತೆ ಮಾಡುವ ಉದ್ದೇಶ. ಒಕ್ಕಲಿಗ ಸಮುದಾಯ ಡಿಕೆಶಿ ಕೈ ಬಿಟ್ಟಿಲ್ಲ ಅನ್ನೋ ಸಂದೇಶ ರವಾನೆ.ಬಿಜೆಪಿ, ಕಾಂಗ್ರೆಸ್ ಹೈಕಮಾಂಡ್‍ಗೆ ಶಕ್ತಿಪ್ರದರ್ಶನ ಮೂಲಕ ಸಂದೇಶ.. ಒಕ್ಕಲಿಗ ನಾಯಕರನ್ನೇ ಟಾರ್ಗೆಟ್ ಮಾಡ್ತಿರುವ ಆರೋಪ..HDK ವಿರುದ್ಧವೂ ಸಂಚು ನಡೆಯುತ್ತಿದೆ ಎಂಬ ಅನುಮಾನ..ಸಿದ್ದಾರ್ಥ್ ಸಾವಿಗೂ ಐಟಿ, ಇಡಿ ಒತ್ತಡ ಕಾರಣ ಎಂಬ ಆರೋಪ
ಸಿಟಿ ರವಿ ಪ್ರತಿಕ್ರಿಯೆ
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ವಿಚಾರ.
ಮೈಸೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿಕೆ. ಸತ್ಯವಂತರಿಗೆ ಇದು ಕಾಲವಲ್ಲ. ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಒಕ್ಕಲಿಗ ಸಮುದಾಯಕ್ಕೆ ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ. ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂತಹ ಮಹನೀಯರು. ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ತೀರ್ಮಾನ ಮಾಡಿಕೊಳ್ಳಲಿ. ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದ ಸಿ.ಟಿ.ರವಿ. ಇ.ಡಿ.ಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟು ಹಾಕಿದವರು ಯಾರು ? ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ ? ಮೈಸೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನೆ.
ಬೆಂಗಳೂರಿಗರಿಗೆ ಇಂದು ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ
ಬೆಂಗಳೂರಿನ 15 ಪ್ರಮುಖ ರಸ್ತೆಗಳ ಸಂಚಾರ ಬದಲು. ಇಂದು ಬದಲಿ ಮಾರ್ಗಗಳು ಬಳಸಿದರೆ ಉತ್ತಮ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನತ್ತ ಜನ. ಇಲ್ಲಿಂದ ಫ್ರೀಡಂಪಾರ್ಕ್‍ನತ್ತ ಹೊರಡುತ್ತೆ ರ್ಯಾಲಿ. ಭದ್ರತೆಗೆ 6 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ.
ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗುವ ಮಾರ್ಗ:
ನ್ಯಾಷನಲ್ ಕಾಲೇಜ್ ಮೈದಾನ- ಪಿ ಎಂ.ಕೆ ರಸ್ತೆ- ವಾಣಿವಿಲಾಸ ರಸ್ತೆ- ನ್ಯಾಷನಲ್ ಕಾಲೇಜ್ ಜಂಕ್ಷನ್- ಡಯಾಗನಲ್ ರಸ್ತೆ- ಸಜ್ಜನ್ ರಾವ್ ಸರ್ಕಲ್ – ಮಿನರ್ವ ಸರ್ಕಲ್- ಜೆಸಿ ರಸ್ತೆ- ಶಿವಾಜಿ ಜಂಕ್ಷನ್- ಟೌನ್ ಹಾಲ್- ಎನ್ ಆರ್ ಜಂಕ್ಷನ್- ಪೊಲೀಸ್ ಠಾಣೆ ಜಂಕ್ಷನ್- ಪೊಲೀಸ್ ಕಾರ್ನರ್- ಕೆ ಜಿ ರಸ್ತೆ- ಮೈಸೂರು ಬ್ಯಾಂಕ್ ಸರ್ಕಲ್- ಪ್ಯಾಲೇಸ್ ರೋಡ್- ವೈ ರಾಮಚಂದ್ರ ರಸ್ತೆ- ಕಾಳಿದಾಸ ರಸ್ತೆ ಮೂಲಕ – ಫ್ರೀಡಂಪಾರ್ಕ್. ಡಿಕೆಶಿ ಬಂಧನ ಖಂಡಿಸಿ ರ‍್ಯಾಲಿ ಹಿನ್ನಲೆ
ಪ್ರತಿಭಟನಾ ರ‍್ಯಾಲಿ ಹೋಗುವ ಮಾರ್ಗದ ವಿವರ ಇಲ್ಲಿದೆ-
ನ್ಯಾಷನಲ್ ಕಾಲೇಜು ಮೈದಾನದಿಂದ ವಾಣಿ ವಿಲಾಸ ರಸ್ತೆ,
ಸಜ್ಜನ್ ರಾವ್ ಸರ್ಕಲ್ ನಿಂದ ಮಿನರ್ವ ಸರ್ಕಲ್,
ಅದೇ ಮಾರ್ಗವಾಗಿ ಜೆ.ಸಿ ರಸ್ತೆ- ಶಿವಾಜಿ ಜಂಕ್ಷನ್,
ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಮಾರ್ಗವಾಗಿ ಪ್ರೀಡಂಪಾರ್ಕ್ ತಲುಪಲಿರುವ ಪ್ರತಿಭಟನಾ ರ್ಯಾಲಿ
ಮದುವೆಗೆ ತಟ್ಟಿದ ಪೊಲೀಸರ ಬಂದೋಬಸ್ತ್ ಬಿಸಿ..
ಬೃಹತ್ ಪ್ರತಿಭಟನಾ ರ್ಯಾಲಿ ಹಿನ್ನಲೆ .. ನ್ಯಾಷನಲ್ ಕಾಲೇಜು ಮುಂಭಾಗದ ರಸ್ತೆ ಪೂರ್ತಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿರೋ ಪೊಲೀಸ್ರು.. ಅದೇ ಮಾರ್ಗದಲ್ಲಿರೋ ಸತ್ಯ ಪ್ರಮೋದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರೋ ಮದುವೆ.. ಮದುವೆಗೆ ಬರುವ ಎಲ್ಲಾ ವಾಹನಗಳನ್ನ ತಡೆಯುತ್ತಿರೋ ಸಂಚಾರಿ ಪೊಲೀಸ್ರು .. ಆ ವಾಹನಗಳನ್ನ ಬೇರೆಡೆ ಪಾರ್ಕಿಂಗ್ ಮಾಡಿ ಬನ್ನಿ ಅಂತಿರೋ ಸಂಚಾರಿ ಪೊಲೀಸ್ರು… ಬಸವನಗುಡಿ ಮಾರ್ಗದಲ್ಲಿ ವಾಹನಗಳನ್ನ ನಿಲ್ಲಿಸಿ ಮದುವೆಗೆ ಬರ್ತಿರೋ ಮಂದಿ…
ಸಾಲುಗಟ್ಟಿ ನಿಂತಿರುವ ಟಿಟಿ ವಾಹನಗಳು
ರಾಜಾಜಿನಗರ ಮೈದಾನದಲ್ಲಿ ಸಾಲುಗಟ್ಟಿ ನಿಂತಿರುವ ಟಿಟಿ ವಾಹನಗಳು. ಒಟ್ಟು 110 ವಾಹನಗಳ ಸಾಲು.. 11.30 ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಲು ಈ ವಾಹನಗಳಲ್ಲಿ ತೆರಳಲಿರುವ ಜನ. ಬೇರೆ ಊರುಗಳಿಂದಲೂ ಬರುತ್ತಿರುವ ಜನರ ದಂಡು. ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ನೇತೃತ್ವದಲ್ಲಿ ಇಲ್ಲಿಂದ ಹೊರಡಲಿರುವ ಜನ. ಕನಕಪುರ ಸೇರಿದಂತೆ ರಾಮನಗರ ಜಿಲ್ಲೆಯಿಂದ 40 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗಿ.. ಕನಕಪುರದಿಂದ 25 ಸಾವಿರ, ರಾಮನಗರದಿಂದ 5, ಚನ್ನಪಟ್ಟಣದಿಂದ 5, ಮಾಗಡಿಯಿಂದ 5 ಸಾವಿರ ಜನರು ಹೋಗಿರುವ ಮಾಹಿತಿ.ಈಗಾಗಲೇ ಬೆಂಗಳೂರು ತಲುಪಿದ ರಾಮನಗರ ಜಿಲ್ಲೆಯ ಡಿಕೆಶಿ ಬೆಂಬಲಿಗರು, ಕರವೇ ಕಾರ್ಯಕರ್ತರು, ಒಕ್ಕಲಿಗ ಸಂಘ ಹಾಗೂ ಸಮುದಾಯದ ಕಾರ್ಯಕರ್ತರು. ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಬಿಜೆಪಿ ಹೊರಟಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪ್ರಮುಖ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಬಂಧಿಸಲಾಗ್ತಿದೆ. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ರನ್ನು ಬಂಧಿಸಿ ಸತತ ವಿಚಾರಣೆ ಮಾಡಲಾಗ್ತಿದೆ.. ಈ ಸಂದರ್ಭದಲ್ಲಿ ಪಕ್ಷ ಮತ್ತು ಸಮುದಾಯದ ಜನ ಅವರ ಜೊತೆ ಇದ್ದೀವಿ.. ಹಾಗಾಗಿ ರಾಜಾಜಿನಗರ ಗ್ರೌಂಡ್ ನಿಂದ 110 ವಾಹನಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಜನ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಹೋಗ್ತಿದೀವಿ.. ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ಹೇಳಿಕೆ
ಮಂಡ್ಯದಲ್ಲಿ ವಿನೂತನ ಚಳುವಳಿ
ಡಿಕೆಶಿ ಶೀಘ್ರ ಬಿಡುಗಡೆ ಮತ್ತು ಆರೋಗ್ಯಕ್ಕಾಗಿ ಮಂಡ್ಯದಲ್ಲಿ ವಿನೂತನ ಚಳುವಳಿ.. ಡಿಕೆಶಿ ಅಭಿಮಾನಿ ಬಳಗ ಮತ್ತು ಕಾಂಗ್ರೆಸ್ ಸ್ವಜಾತಿ ಬಳಗದ ವತಿಯಿಂದ ರಕ್ತದಾನ ಚಳುವಳಿ….ಮಂಡ್ಯದ ಡಿ.ಸಿ. ಕಚೇರಿ ಬಳಿ ಡಿಕೆಶಿ ಅಭಿಮಾನಿಗಳಿಂದ ವಿನೂತನ ಚಳುವಳಿ…..ಕಾಂಗ್ರೆಸ್ ನ ಮುಖಂಡ ಡಾ. ರವೀಂದ್ರಗೌಡ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ…. ನೂರಾರು ಅಭಿಮಾನಿಗಳು ರಕ್ತದಾನ ಮಾಡಿ ಪ್ರತಿಭಟನೆ…. ಶೀಘ್ರವೇ ಡಿಕೆಶಿ ಬಿಡುಗಡೆಯಾಗಿ ಅವರ ಆರೋಗ್ಯ ವೃದ್ದಿಸಲಿ ಎಂದು ಹಾರೈಸಿರೋ ಅಭಿಮಾನಿಗಳು.. ದ್ವೇಷದ ರಾಜಕಾರಣದಿಂದ ತಮ್ಮ ನಾಯಕನನ್ನು ಬಂಧಿಸಿರೋ ಬಿಜೆಪಿ ನಡೆ ವಿರುದ್ದ ಅಭಿಮಾನಿಗಳ ಆಕ್ರೋಶ….
ಕರವೇ ನಾರಾಯಣ ಗೌಡ ಹೇಳಿಕೆ.
ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ. ಡಿಕೆಶಿ ನನಗೆ ಆಪ್ತರು, ಹಲವಾರು ಬಾರಿ ನನ್ನ ಸಹಾಯಕ್ಕೆ ನಿಂತಿದ್ರು. ಡಿಕೆಶಿಗೆ ಕಾನೂನು ಹೋರಾಟಕ್ಕೆ ಆತ್ಮಬಲ ತುಂಬಲು ಈ ಹೋರಾಟ. ನಾನು ಕರವೇ ಅಧ್ಯಕ್ಷನಾಗಿ ಈ ಹೋರಾಟಕ್ಕೆ ಬಂದಿಲ್ಲ, ಡಿಕೆಶಿ ಅಸಪ್ತನಾಗಿ ಬಂದಿದ್ದೀನಿ. ಈ ಹೋರಾಟದ ಬಗ್ಗೆ ಎಚ್.ಡಿ.ದೇವೇಗೌಡ ಜೊತೆ 45 ನಿಮಿಷ ಚರ್ಚೆ ಮಾಡಿದ್ದೀನಿ. ಕೇಂದ್ರ ಸರ್ಕಾರದ ಕುತಂತ್ರ ನೀತಿಯ ವಿರುದ್ಧ ಹೋರಾಟ ಮಾಡ್ತಿರೋದು. ಕುಮಾರಸ್ವಾಮಿ, ರೇವಣ್ಣ, ಪುಟ್ಟರಾಜುರನ್ನ ಹೋರಾಟಕ್ಕೆ ಕಳಿಸ್ತೀನಿ ಎಂದು ದೇವೇಗೌಡರು ಹೇಳಿದ್ದಾರೆ. ಮಧ್ಯಾಹ್ನ 2 ಗಂಟೆ ವರೆಗೂ ಹೋರಾಟ ನಡೆಯುತ್ತೆ. ಹೀಗಾಗಿ ಕುಮಾರಸ್ವಾಮಿ ಹಾಗೂ ಇತರ ನಾಯಕರು ಬರ್ತಾರೆ ಎಂಬ ವಿಶ್ವಾಸವಿದೆ. ನಾನು ರಾಜಕಾರಣಕ್ಕೆ ಬರುವ ಸಲುವಾಗಿ ಈ ಹೋರಾಟ ಮಾಡ್ತಿಲ್ಲ. ನಾನು ರಾಜಕಾರಣಕ್ಕೆ ಬರುವ ಬಗ್ಗೆ ಚರ್ಚೆ ಮಾಡಿದ್ದು ನಿಜ. ನಾನು ಮಹಾಲಕ್ಷ್ಮಿ ಲೇಔಟ್ ನಲ್ಲಿ ಕಣಕ್ಕಿಳಿಯುವ ಬಗ್ಗೆ ಕಾಂಗ್ರೆಸ್ ಜೆಡಿಎಸ್ ನಾಯಕರು ಚರ್ಚೆ ಮಾಡಿದ್ದಾರೆ. ಆದ್ರೆ ಈ ಹೋರಾಟಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ನಾರಾಯಣ ಗೌಡ ಹೇಳಿಕೆ. ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿದ ನಾರಾಯಣಗೌಡ
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆ.
ಸಾರ್ವಜನಿಕರಿಗೆ ತೊಂದರೆ ಆಗಬಾರದು. ಅವರು ಪ್ರತಿಭಟನೆ ನಡೆಸಲಿ. ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ನಿನ್ನೆ ರಜೆ ಇವತ್ತು ಕೆಲಸ ದಿನ ಅಗಿದೆ ಯಾರಿಗು ತೊಂದರೆ ಅಗಬಾರದು. ಆಯೋಜಕರಿಗೆ ತಿಳುವಳಿಕೆ ನೀಡಲಾಗಿದೆ. ಬಲವಂತವಾಗಿ ಆಂಗಡಿ ಮುಗ್ಗಟ್ಟು ಬಂದ್ ಮಾಡಿಸಬಾರದು. ಡಿಸಿಪಿಗಳನ್ನ ನಿಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‍ರಿಂದ ನ್ಯಾಷನಲ್ ಕಾಲೇಜ್ ಗ್ರೌಂಡ್‍ಗೆ ಭೇಟಿ ನೀಡಿ ಭದ್ರತೆ ಪರಿಶೀಲನೆ. ಪ್ರತಿಭಟನಾ ರ್ಯಾಲಿ ಆರಂಭವಾಗುವ ನ್ಯಾಷನಲ್ ಕಾಲೇಜು ವೃತ್ತದ ಬಳಿ ವಾಹನ ಸಂಚಾರ ಸಾಮಾನ್ಯವಾಗಿದೆ. ಪ್ರತಿಭಟನಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಂಚಾರಿ ಮತ್ತು ನಾಗರೀಕ ಪೋಲೀಸ್ ನಿಯೋಜನೆ ಮಾಡಲಾಗಿದೆ
ಸಿಎಂ ಬಿಎಸ್‍ವೈ ಭೇಟಿ ಮಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗ ಸಮಾಜದಿಂದ ಪ್ರತಿಭಟನೆ ಹಿನ್ನೆಲೆ.. ಸಿಎಂ ಬಿಎಸ್‍ವೈ ಭೇಟಿ ಮಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ.. ಒಕ್ಕಲಿಗ ಸಮುದಾಯದ ಪ್ರತಿಭಟನೆ ಕುರಿತು ಮಾಹಿತಿ.. ಪ್ರತಿಭಟನೆಗೆ ಮಾಡಿರುವ ಭದ್ರತೆ ಕುರಿತು ಸಿಎಂಗೆ ಮಾಹಿತಿ ನೀಡಿದ ಬೊಮ್ಮಾಯಿ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರಿಂದಲೂ ಮಾಹಿತಿ.. ಪ್ರತಿಭಟನೆ ಹಿನ್ನೆಲೆ ಭದ್ರತೆ ಕಲ್ಪಿಸಿರುವ ಕುರಿತು ಸಿಎಂ ಬಿಎಸ್‍ವೈಗೆ ಮಾಹಿತಿ ಕೊಟ್ಟ ಭಾಸ್ಕರ್ ರಾವ್.. ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸಿಎಂ ಭೇಟಿ
ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ
ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ.. ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಹಿತಿ ಸಿಕ್ಕರೆ ನಿರ್ದಾಕ್ಷಿಣ್ಯ ಕ್ರಮ.. ಬಿಎಂಟಿಸಿಯಲ್ಲೇ 3 ಸಾವಿರಕ್ಕೂ ಹೆಚ್ಚು ಒಕ್ಕಲಿಗ ನೌಕರರಿರುವ ಹಿನ್ನಲೆ.. ಜಾತಿ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ಭಾಗೀ ಸಾಧ್ಯತೆ.. ಒಕ್ಕಲಿಗ ನೌಕರರ ಹಾಜರಾತಿ, ಗೈರಿನ ಬಗ್ಗೆ ನಿಗಾ ಇಡುವಂತೆ ಡಿಪೋ ಮ್ಯಾನೇಜರ್ಸ್‍ಗೆ ಸೂಚನೆ. ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಸಾರಿಗೆ ಸಂಚಾರದ ಮೇಲೆ ವ್ಯತ್ಯಯ ಬೀರುವ ಸಾಧ್ಯತೆ.. ಈ ಹಿನ್ನಲೆಯಲ್ಲಿ ಮೇಲಾಧಿಕಾರಿಗಳಿಂದ ಆದೇಶ
ದೇವೇಗೌಡ-ಹೆಚ್‍ಡಿಕೆ ಗೈರು?
ಪ್ರತಿಭಟನೆಯಿಂದ ದೂರ ಉಳಿಯಲಿದ್ದಾರೆ ಗೌಡರು..ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಲ್ಲ..ನೈತಿಕ ಬೆಂಬಲ ನೀಡಿ ಪ್ರತಿಭಟನೆಯಿಂದ ದೂರ..ಚನ್ನಪಟ್ಟಣಕ್ಕೆ ತೆರಳಲಿರುವ ಮಾಜಿ ಸಿಎಂ ಹೆಚ್‍ಡಿಕೆ..ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾಗಲಿರುವ ಹೆಚ್‍ಡಿಕೆ..ಬೆಳಗ್ಗೆ 11ಕ್ಕೆ ಶಿಕ್ಷಕರ ದಿನಾಚರಣೆಯಲ್ಲಿ ಹೆಚ್‍ಡಿಕೆ ಭಾಗಿ..ಮಧ್ಯಾಹ್ನ 12ಕ್ಕೆ ಕೆಡಿಪಿ ಸಭೆಯಲ್ಲಿ ಕುಮಾರಸ್ವಾಮಿ ಭಾಗಿ
ಬಿಗಿ ಭದ್ರತೆ
ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ ಬಳಿ ರ್ಯಾಲಿ ಬರುವ ಹಿನ್ನಲೆ.. ಫ್ರೀಡಂ ಪಾರ್ಕಿನಲ್ಲಿ ಭಾರೀ ಪೊಲೀಸ್ ಬಿಗಿ ಭದ್ರತೆ.. ಒಂದು ಹೆಚ್ಚುವರಿ ಪೋಲೀಸ್ ಆಯುಕ್ತ ಒಂದು ಡಿಸಿಪಿ, 3 ಎಸಿಪಿ ಸೇರಿದಂತೆ ಸುಮಾರು 500 ಜನ ಪೊಲೀಸರ ಉಪಸ್ಥಿತಿ.. ಫ್ರೀಡಂ ಪಾರ್ಕಿನಲ್ಲಿ ಸ್ಥಳ ಕಡಿಮೆ ಇರುವಿದರಿಂದ ರ್ಯಾಲಿಯಲ್ಲಿ ಬಂದವರನ್ನು ಹೆಚ್ಚು ಸಮಯ ಇಲ್ಲಿರಲು ಅವಕಾಶವಿಲ್ಲ.. ಫ್ರೀಡಂ ಪಾರ್ಕ್ ರ್ಯಾಲಿಯ ಎಂಡ್ ಪಾಯಿಂಟ್ ಆಗಲಿದೆ ಅಷ್ಟೇ ಎಂದು ಮಾಹಿತಿ ನೀಡಿದ ಪೊಲೀಸ್ ಮೂಲಗಳ ಮಾಹಿತಿ.. ಸಂಚಾರದಟ್ಟಣೆಯಾಗದಂತೆ ಆಯಾ ಮಾರ್ಗದಲ್ಲಿ 400ಕ್ಕೂ ಹೆಚ್ಚು ಸಂಚಾರಿ ಪೊಲೀಸರ ನಿಯೋಜನೆ.. ಒಂದೊಂದು ರಸ್ತೆ ಮಾರ್ಗಕ್ಕೆ ಸಂಚಾರಿ ಎಸಿಪಿ ಸೇರಿದಂತೆ ಇಬ್ಬರು ಇನ್ಸ್ ಪೆಕ್ಟರ್ ಗಳು ಹಾಗು ಸಿಬ್ಬಂದಿ ನಿಯೋಜನೆ
ಪ್ರತಿಭಟನೆ ವಿರೋಧಿಸಿ ಬಹಿರಂಗ ಪತ್ರ
ಇಡಿಯಿಂದ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ ಹಿನ್ನಲೆ.. ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ.. ಡಿಕೆಶಿ ಬೆಂಬಲಿಸಿ ಪ್ರತಿಭಟಿಸುತ್ತಿರುವ ಬಗ್ಗೆ ಶಶಿಧರ್ ಬಹಿರಂಗ ಪತ್ರ.. ಶಶಿಧರ್ – ಪೊಲೀಸ್ ಮಹಾ ಸಂಘದ ಅಧ್ಯಕ್ಷ.. ಡಿಕೆಶಿ ಈ ನಾಡಿನ ಸಂತನೂ ಅಲ್ಲ, ಸಾರ್ವಭೌಮನ್ನೂ ಅಲ್ಲಾ ಪ್ರಸ್ತುತ ಆತ ನ್ಯಾಯಾಲಯದ ವಿಚಾರಣಾಧೀನ ಕ್ರಿಮಿನಲ್ ಆರೋಪಿ. ಡಿಕೆಶಿ ಬೆಂಬಲಿಸಿ ಪ್ರತಿಭಟನೆ ಮಾಡುವುದು ಜನರಲ್ಲಿ ಅಸಹ್ಯ ಭಾವನೆ ಮೂಡುತ್ತಿದೆ.. ಕೇಸ್ ಕೋರ್ಟ್‍ನಲ್ಲಿದೆ, ಈ ಹಂತದಲ್ಲಿ ಜಾತಿ ರಾಜಕೀಯ ಬಣ್ಣ ಕಟ್ಟಿ ಜನತೆಯನ್ನು ಪ್ರಚೋದಿಸಲಾಗುತ್ತಿದೆ.. ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ಹೆಸರಿನಲ್ಲಿ ಕೇಂದ್ರ ಸಂಸ್ಥೆಗಳ ಮೇಲೆ ನೇರಾನೇರ ದಾಳಿ.. ಇಷ್ಟಕ್ಕೂ ಯಾವ ಪುರುಷಾರ್ಥಕ್ಕಾಗಿ ಉದ್ದೇಶಿತ ಪ್ರತಿಭಟನೆ? ಇದರ ಹಿಂದೆ ಕುತ್ಸಿತ ಮನಸ್ಸುಗಳ ಷಡ್ಯಂತರ ಅಡಗಿದೆ.. ಡಿಕೆಶಿಯನ್ನು ಇಡಿ ಬಂಧಿಸಿದರೆ, ಒಕ್ಕಲಿಗ ಸಮುದಾಯ ಯಾಕೆ ಪ್ರತಿಭಟಿಸಬೇಕು..? ಇಂತಹವರ ಕುಕೃತ್ಯದಿಂದ ಜಾತಿಯ ಸಂಘರ್ಷ ಏರ್ಪಡುವ ಸಾಧ್ಯತೆ.. ಈ ರೀತಿ ಬಹಿರಂಗವಾಗಿ ಪತ್ರ ಬರೆದಿರುವ ಶಶಿಧರ್..