Tuesday, January 21, 2025
ಸುದ್ದಿ

ಬಿಪಿಯಲ್ ಕಾರ್ಡ್‍ದಾರರಿಗೆ ತೂಗರಿ ಬೇಳೆ ವಿತರಣೆ ಸ್ಥಗಿತ – ಕಹಳೆ ನ್ಯೂಸ್

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಬಿಪಿಎಲ್ ಕುಟುಂಬಗಳಿಗೆ, ರಾಜ್ಯ ಸರ್ಕಾರವು ಶಾಕಿಂಗ್ ನ್ಯೂಸ್‍ವೊಂದನ್ನು ನೀಡಿದ್ದು, ಈ ತಿಂಗಳಿನಿಂದಲೇ ತೂಗರಿ ಬೇಳೆ ವಿತರಣೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ತೂಗರಿ ಬೇಳೆ ಬಾಬ್ತಿನ ಮೊತ್ತವನ್ನು, ರೈತರ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೂಳ್ಳಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ರಾಜ್ಯ ಸರ್ಕಾರ ಸೂಚನೆ ಹಿನ್ನಲೆಯಲ್ಲಿ ಇನ್ನು ಮುಂದೆ ನ್ಯಾಯ ಬೆಲೆ ಅಂಗಡಿಯಲ್ಲಿ ತೂಗರಿ ವಿತರಣೆ ಸ್ಥಗಿತಗೂಳ್ಳಲಿದೆ. ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಬಿಪಿಯಲ್ ಕುಟುಂಬಕ್ಕೆ ಯೂನಿಟ್ ಲೆಕ್ಕದಲ್ಲಿ ಒಬ್ಬ ಸದಸ್ಯರಿಗೆ 7 ಕೆ.ಜಿ ಅಕ್ಕಿ, ಹಾಗೂ ಕುಟುಂಬಕ್ಕೆ 38 ರೂ. ದರದಲ್ಲಿ 1 ಕೆ.ಜಿ ತೂಗರಿ ಬೇಳೆ ನೀಡಲಾಗುತ್ತಿತ್ತು. ಇದರಿಂದ ಆಹಾರ ಇಲಾಖೆಗೆ 12,500 ಮೆಟ್ರಿಕ್ ಟನ್ ತೂಗರಿ ಬೇಳೆ ಖರೀದಿಸಬೇಕಿತ್ತು. ಇದಕ್ಕಾಗಿ ಸರ್ಕಾರಕ್ಕೆ ವಾರ್ಷಿಕ 800 ಕೋಟಿ ಹೊರೆಯಾಗುತ್ತಿತ್ತು, ಮಾಸಿಕ 57 ರಿಂದ 58 ಕೋಟಿ ಹೊರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಈ ಕ್ರಮ ಕೈಗೂಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು