Sunday, November 24, 2024
ಸುದ್ದಿ

ಸಿಆರ್‌ಝಡ್ ವಲಯದಲ್ಲಿ ಮೂರು ತಿಂಗಳು ಮರಳುಗಾರಿಕೆಗೆ ಅವಕಾಶ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸಿಆರ್‌ಝಡ್ ವಲಯದಲ್ಲಿ, ಮಳೆಗಾಲದಲ್ಲಿ ನಿಷೇಧಗೊಂಡಿದ್ದ ಮರಳುಗಾರಿಕೆ ಪುನರಾರಂಭಗೂಂಡಿದ್ದು, ಇನ್ನು ಈ ಭಾಗದಲ್ಲಿ ಮರಳುಗಾರಿಕೆ ನಡೆಸುವುದಕ್ಕೆ ಮೂರು ತಿಂಗಳಷ್ಟೇ ಅವಕಾಶವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಎರಡೂವರೆ ತಿಂಗಳ ನಿಷೇಧ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮರಳುಗಾರಿಕೆಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಮರಳು ಅಭಾವದ ಸಮಸ್ಯೆ ಅಷ್ಟೊಂದು ಕಂಡುಬಂದಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ಕಳೆದ ವರ್ಷ ಸುಮಾರು ಆರು ತಿಂಗಳು ವಿಳಂಬವಾಗಿ, ಮರಳುಗಾರಿಕೆ ನಡೆಸುವುದಕ್ಕೆ ಅನುಮತಿ ದೂರೆತಿದ್ದರೂ, ಮರಳು ಲಭ್ಯತೆ ವಿಚಾರದಲ್ಲಿ ಸಾಕಷ್ಟು ತೊಂದರೆಯೂ ಆಗಿತ್ತು. ಜಿಲ್ಲೆಯಲ್ಲಿ 2019ರ ಡಿಸೆಂಬರ್ 25ರ ಬಳಿಕ ಮರಳುಗಾರಿಕೆ ಮತ್ತೆ ಸ್ಥಗಿತಗೂಳ್ಳಲಿದೆ. ಆ ಬಳಿಕ ಹೊಸದಾಗಿ ಬ್ಯಾಥಮೆಟ್ರಿಕ್ ಸರ್ವೇ ನಡೆಸಿದ ಬಳಿಕವಷ್ಟೇ ಮರಳುಗಾರಿಕೆಗೆ ಅವಕಾಶ ದೊರೆಯಲಿದೆ. ಈ ಪ್ರಕ್ರಿಯೆಗೆ ಕನಿಷ್ಠ 2 ತಿಂಗಳ ಕಾಲಾವಕಾಶ ಸಾಧ್ಯತೆಗಳಿವೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪದ್ಮಶ್ರೀ, ಸ್ಪಷ್ಟ ಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು