Monday, November 25, 2024
ಸುದ್ದಿ

ಮಹದಾಯಿ ವಿವಾದ: ಸೆ.14ಕ್ಕೆ ಗೋವಾ, ಕರ್ನಾಟಕ ಸಿಎಂಗಳ ಸಭೆ – ಕಹಳೆ ನ್ಯೂಸ್

ಬೆಂಗಳೂರು : ಮಹದಾಯಿ ವಿವಾದದ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗೋವಾ ಸಿಎಂ ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಯೋಜನೆ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ಬೆಳಗಾವಿಯಲ್ಲಿ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, “ಮಹದಾಯಿ ವಿವಾದದ ಕುರಿತು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಮಾಡುತ್ತೇವೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಈಗಾಗಲೇ ಭೇಟಿ ಮಾಡಿರುವೆ” ಎಂದು ಹೇಳಿದರು.

ಸೆಪ್ಟೆಂಬರ್ 14ರಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿಗೆ ಸೆಪ್ಟೆಂಬರ್ 14ರಂದು ದಿನಾಂಕ ನಿಗಧಿಯಾಗಿದೆ. ಜಲಸಂಪನ್ಮೂಲ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿರುವ ಯಡಿಯೂರಪ್ಪ ಪಣಜಿಯಲ್ಲಿ ಪ್ರಮೋದ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹದಾಯಿ ನ್ಯಾಯಾಧೀಕರಣ ನೀಡಿದ ತೀರ್ಪನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಗೋವಾ ಆರೋಪ ಮಾಡುತ್ತಿದೆ. ನ್ಯಾಯಾಧೀಕರಣ ಅಂತಿಮ ತೀರ್ಪಿನಲ್ಲಿ ಗೋವಾಕ್ಕೆ 24 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ 13.24 ಟಿಎಂಸಿ ಅಡಿ ನೀರು ಸಿಕ್ಕಿದೆ.

ಅಂತಿಮ ತೀರ್ಪು ಪ್ರಕಟವಾಗಿದೆ
2018ರ ಆಗಸ್ಟ್‍ನಲ್ಲಿ ಮಹದಾಯಿ ನ್ಯಾಯಾಧೀಕರಣ ಅಂತಿಮ ತೀರ್ಪನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಜೆ. ಎಂ. ಪಾಂಚಾಲ್ ನೇತೃತ್ವದ ನ್ಯಾಯಾಧೀಕರಣ ಕರ್ನಾಟಕಕ್ಕೆ 13.42, ಗೋವಾಕ್ಕೆ 24 ಮತ್ತು ಮಹಾರಾಷ್ಟ್ರಕ್ಕೆ 1.30 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ಕರ್ನಾಟಕ ಕುಡಿಯುವ ನೀರಿನ ಉದ್ದೇಶಕ್ಕೆ 5.5 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದಾಗಿದೆ.

ಕರ್ನಾಟಕದ ವಾದವೇನು?
ಮಹದಾಯಿ ನ್ಯಾಯಾಧೀಕರಣದ ಮುಂದೆ ಕರ್ನಾಟಕ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು 7.5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮಧ್ಯಂತರ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಈ ಮನವಿಯನ್ನು ನ್ಯಾಯಾಧೀಕರಣ ತಿರಸ್ಕರಿಸಿತ್ತು. ಗೋವಾ ಸರ್ಕಾರದ ವಿರೋಧ ಮಹದಾಯಿ ಯೋಜನೆಗೆ ಗೋವಾ ರಾಜ್ಯ ವಿರೋಧ ವ್ಯಕ್ತಪಡಿಸುತ್ತದೆ. ಕರ್ನಾಟಕದ ಬೆಳಗಾವಿಯ ಭೀಮಘಢ್‍ನಲ್ಲಿ ಮಹದಾಯಿ ನದಿ ಹುಟ್ಟುತ್ತದೆ. ಮೊದಲು ರಾಜ್ಯದಲ್ಲಿ 35 ಕಿ.ಮೀ. ಹರಿಯುವ ನದಿ ಉಳಿದ 52 ಕಿ. ಮೀ. ಗೋವಾದಲ್ಲಿ ಹರಿಯುತ್ತದೆ. ಯೋಜನೆ ಜಾರಿಯಾದರೆ ಗೋವಾಕ್ಕೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂಬುದು ನೆರೆಯ ರಾಜ್ಯದ ವಾದವಾಗಿದೆ.

ಕರ್ನಾಟಕ ಬೇಡಿಕೆ ಏನು?
ಮಹದಾಯಿ ನದಿಯಲ್ಲಿ 188 ಟಿಎಂಸಿ ಅಡಿ ನೀರು ಲಭ್ಯವಿದೆ ಎಂಬುದನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ. ರಾಜ್ಯಕ್ಕೆ ಈಗ 13.24 ಟಿಎಂಸಿ ಅಡಿ ನೀರು ನೀಡಲಾಗಿದೆ. ಉಳಿದ ಎರಡೂ ರಾಜ್ಯಗಳಿಗೆ ಹಂಚಿಕೆಯಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ನಮಗೆ ಕೊಡಿ ಕುಡಿಯುವ ನೀರಿನ ಉದ್ದೇಶಕ್ಕೆ ನಾವು ಬಳಸಿಕೊಳ್ಳುತ್ತೇವೆ ಎಂಬುದು ಕರ್ನಾಟಕದ ವಾದವಾಗಿದೆ.