Tuesday, January 21, 2025
ಸಿನಿಮಾ

ಅಂಬಿ ಪುತ್ರನ ಎರಡನೇ ಸಿನಿಮಾಗೆ ‘ಆರೆಂಜ್’ ನಿರ್ದೇಶಕನ ಸಾರಥ್ಯ? ಅಂಬಿ ಪುತ್ರನ ಎರಡನೇ ಸಿನಿಮಾಗೆ ನಿರ್ದೇಶಕ ಯಾರು ? – ಕಹಳೆ ನ್ಯೂಸ್

ಅಮರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಮರ್ ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಆದ್ರು ಅಭಿ ಮುಂದಿನ ಸಿನಿಮಾ ಇನ್ನು ಅನೌನ್ಸ್ ಆಗಿಲ್ಲ. ಆದ್ರೆ ಇತ್ತೀಚಿಗೆ ಅಭಿಷೇಕ್ ಶೇರ್ ಮಾಡಿರುವ ಬೆಂಕಿಯಂತ ಲುಕ್ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಕಿಯಂತೆ ಬಂದ ಅಭಿಷೇಕ್: ಅಂಬಿ ಪುತ್ರನ ಲುಕ್ ಕಂಡ ನಿಖಿಲ್ ಹೇಳಿದ್ದೇನು?
ಆದ್ರೆ ಇದು ಯಾವ ಸಿನಿಮಾದ್ದು, ದಿಢೀರನೆ ಅಭಿ ರಡಗ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದೇಕೆ ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. ಈ ಲುಕ್ ನೋಡಿ ಸಾಕಷ್ಟು ಜನ ಚಿತ್ರರಂಗದವರು ಅಭಿಗೆ ವಿಶ್ ಮಾಡಿದ್ದರು. ಇದು ಅಭಿಷೇಕ್ ಎರಡನೆ ಸಿನಿಮಾದ ಲುಕ್ ಎನ್ನುವುದು ಗೊತ್ತಾದರು, ಯಾರು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದು ಸಸ್ಪೆನ್ಸ್ ಆಗಿತ್ತು. ಆದ್ರೀಗ ಅಭಿಯ ಮುಂದಿನ ಸಿನಿಮಾ ಸಾರಥ್ಯವನ್ನು ನಿರ್ದೇಶಕ ಪ್ರಶಾಂತ್ ರಾಜ್ ವಹಿಸಿಕೊಂಡಿದ್ದಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಅಭಿ?
ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಲಕ್ಕೆ ತೆರೆ ಬಿದ್ದಿದೆ. ಸಾಕಷ್ಟು ಜನ ನಿರ್ದೇಶಕರ ಹೆಸರುಗಳು ಕೇಳಿಬರುತ್ತಿದೆ. ಆದ್ರೀಗ ಲವ್ ಗುರು, ಗಾನ ಬಜಾನ, ಜೂಮ್, ಆರೆಂಜ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಪ್ರಶಾಂತ್ ರಾಜ್, ಅಭಿಷೇಕ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.

ಕಥೆ ಫೈನಲ್ ಆಗಿದೆ
ಪ್ರಶಾಂತ್ ರಾಜ್ ಈಗಾಗಲೆ ಕಥೆ ಮಾಡಿಕೊಂಡು ಅಭಿಷೇಕ್ ಜೊತೆ ಮಾತುಕತೆ ನಡೆಸಿದ್ದಾರೆ. ಕಥೆ ಕೇಳಿ ಅಭಿ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದೊಂದು ಪಕ್ಕ ಕಮರ್ಷಿಯಲ್ ಎಂಟರ್‍ಟೇನರ್ ಸಿನಿಮಾವಾಗಿರಲಿದೆಯಂತೆ. ಪ್ರಶಾಂತ್ ರಾಜ್ ಸಿನಿಮಾಗಳು ಸಖತ್ ಕಲರ್ ಫುಲ್ ಆಗಿರುತ್ತೆ. ಆದರೆ ಈ ಸಿನಿಮಾ ಸಂಪೂರ್ಣ ವಿಭಿನ್ನವಾಗಿರಲಿದೆ ಎನ್ನುವುದು ಮೂಲಗಳ ಮಾಹಿತಿ.

ಅಭಿ ಲುಕ್‍ಗೆ ನಿಖಿಲ್ ಫಿದಾ

ಅಭಿಷೇಕ್ ಸದ್ಯ ರಿವೀಲ್ ಮಾಡಿರುವ ಖಡಕ್ ಲುಕ್ ಗೆ ಅನೇಕರು ಫಿದಾ ಆಗಿದ್ದಾರೆ. ಚಿತ್ರರಂಗದ ಅನೇಕ ಗೆಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೆಳೆಯ ನಿಖಿಲ್ ಕುಮಾರ್ ಸಹ ಅಭಿಷೇಕ್ ಲುಕ್ ನೋಡಿ “ಲುಕ್ಕಿಂಗ್ ಶಾರ್ಪ್…ನಿನ್ನ ಮುಂದಿನ ಚಿತ್ರಕ್ಕೆ ಶುಭಾಶಯ” ಎಂದು ಕಮೆಂಟ್ ಮಾಡಿದ್ದರು. ಅಭಿಷೇಕ್ ಈ ಲುಕ್ ಈಗ ವೈರಲ್ ಆಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗುರುದತ್ ನಿರ್ದೇಶನದಲ್ಲಿ ಅಭಿ ಮೂರನೆ ಸಿನಿಮಾ
ಅಭಿಷೇಕ್ ಎರಡನೆ ಸಿನಿಮಾಗೆ ಗುರುದತ್ ಗಣಿಗ ಆಕ್ಷನ್ ಕಟ್ ಹೇಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಗುರುದತ್ ಅಭಿಷೇಕ್ ಮೂರನೆ ಸಿನಿಮಾದ ಸಾರಥ್ಯ ವಹಿಸಿಕೊಳ್ಳುತ್ತಾರಂತೆ. ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದ ಸಮಯದಲ್ಲೆ ಅಭಿ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಬಗ್ಗೆ ಮಾತುಕತೆಯಾಗಿತ್ತಂತೆ. ಸದ್ಯ ಸಮಲತಾ ಮತ್ತು ಅಭಿಷೇಕ್ ಜೊತೆ ಮಾತುಕತೆ ಕೂಡ ಮಾಡಿದ್ದಾರಂತೆ. ಅಭಿಷೇಕ್ ಎರಡನೆ ಸಿನಿಮಾ ಮುಗಿದ ಬಳಿಕ ಗುರುದತ್ ಸಿನಿಮಾ ಪ್ರಾರಂಭವಾಗಲಿದೆ.