Tuesday, January 21, 2025
ಸುದ್ದಿ

ಫಿಲೋಮಿನಾದಲ್ಲಿ ‘ಕೆಮ್‍ಮಿಂಗಲ್-2019’ ಸ್ಪರ್ಧೆಯ ಬಹುಮಾನ ವಿತರಣೆ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ಕಾಲೇಜಿನ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ ‘ಕೆಮ್‍ಮಿಂಗಲ್-2019’ ಅಂತರ್ ತರಗತಿ ಸ್ಪರ್ಧಾ ಕಾರ್ಯಕ್ರಮದ ಬಹುಮಾನ ವಿತರಣೆಯು ಕಾಲೇಜು ಸಭಾಂಗಣದಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಾದ ಕೆಮ್‍ಪೋಸ್ಟರ್ ಮೇಕಿಂಗ್‍ನಲ್ಲಿ ತೃತೀಯ ಬಿಎಸ್ಸಿಯ ಸಮೀದ ಮತ್ತು ಶುಭಲಕ್ಷ್ಮೀ ಕೆ ಬಿ(ಪ್ರ), ದ್ವಿತೀಯ ಬಿಎಸ್ಸಿಯ ಪಲ್ಲವಿ ಎ ಮತ್ತು ಲಾವಣ್ಯ ಎನ್ ಕೆ(ದ್ವಿ), ಕೆಮ್‍ಶರದ್ಸ್‍ನಲ್ಲಿ ತೃತೀಯ ಬಿಎಸ್ಸಿಯ ಅಲಿಫಿಯಾ ಪಿರೇರಾ ಮತ್ತು ಅಕ್ಷಯಾ ಕೆ ಎಲ್(ಪ್ರ), ದ್ವಿತೀಯ ಬಿಎಸ್ಸಿಯ ಅವನಿ ಎಸ್ ಮತ್ತು ಅನು ಡಿ(ದ್ವಿ), ಕೆಮ್‍ಎಸ್ಸೆಯಲ್ಲಿ ದ್ವಿತೀಯ ಬಿಎಸ್ಸಿಯ ರೆನಿಲಾ ಮಾರ್ಟಿಸ್ (ಪ್ರ), ತೃತೀಯ ಬಿಎಸ್ಸಿಯ ಸಮೀದ(ದ್ವಿ), ಕೆಮ್‍ರಂಗೋಲಿಯಲ್ಲಿ ಪ್ರಥಮ ಬಿಎಸ್ಸಿಯ ಶರಣ್ಯ ಕೆ ಮತ್ತು ಮತ್ತು ಸಹನಾ ಪಿ ಜಿ (ಪ್ರ), ಪ್ರಥಮ ಬಿಎಸ್ಸಿಯ ಚೆನ್ನಬಸಮ್ಮ ಡಿ ಕೆ ಮತ್ತು ರಕ್ಷಾ ಡಿ(ದ್ವಿ), ಕೆಮ್‍ಕ್ವಿಜ್‍ನಲ್ಲಿ ತೃತೀಯ ಬಿಎಸ್ಸಿಯ ದಿವ್ಯಶ್ರೀ ಎಸ್ ಭಟ್ ಮತ್ತು ಶಿಲ್ಪಾಶ್ರೀ ಕೆ(ಪ್ರ), ಪ್ರಥಮ ಬಿಎಸ್ಸಿಯ ಧೀರಜ್ ಎಮ್ ಮತ್ತು ಶ್ರೀವತ್ಸ(ದ್ವಿ), ಕೆಮ್‍ಸೆಮಿನಾರ್‍ನಲ್ಲಿ ತೃತೀಯ ಬಿಎಸ್ಸಿಯ ವಿನಯ್ ಡಿ ಆರ್(ಪ್ರ), ದ್ವಿತೀಯ ಬಿಎಸ್ಸಿಯ ಮೆಲ್ರಿಶಾ ಡಿ’ಸೋಜ ಹಾಗೂ ತೃತೀಯ ಬಿಎಸ್ಸಿಯ ರಚನಾ ಎನ್ ಆರ್(ದ್ವಿ), ಕೆಮ್‍ನಾಚ್‍ನಲ್ಲಿ ತೃತೀಯ ಬಿಎಸ್ಸಿಯ ಇಂಚರಾ ಎಮ್ ಎಸ್ ಮತ್ತು ತಂಡ(ಪ್ರ), ದ್ವಿತೀಯ ಬಿಎಸ್ಸಿಯ ಸಾತ್ವಿಕ್ ಬೆಡೇಕರ್ ಬಿ ಮತ್ತು ತಂಡ(ದ್ವಿ) ಸ್ಥಾನದೊಂದಿಗೆ ತೃತೀಯ ಬಿಎಸ್ಸಿ ತರಗತಿಯು ‘ಕೆಮ್‍ಮಿಂಗಲ್-2019’ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜೇತರನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮಂಗಳೂರು ಕೇಂದ್ರದ ವಿಶೇಷ ಅಧಿಕಾರಿ ಡಾ| ಶಿವಕುಮಾರ್, ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮತ್ತು ವಿಭಾಗ ಮುಖ್ಯಸ್ಥ ಡಾ| ಪಿ. ಎಸ್ ಕೃಷ್ಣ ಕುಮಾರ್ ಬಹುಮಾನ ನೀಡಿ ಅಭಿನಂದಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಡಿ’ಸೋಜ ಬಹುಮಾನ ವಿಜೇತರ ವಿವರ ನೀಡಿದರು.