Sunday, November 24, 2024
ಸುದ್ದಿ

ಜೆಸಿಐ ನೆಕ್ಕಿಲಾಡಿ ಘಟಕದ ಜೆಸಿಐ ಸಪ್ತಾಹದ ಅಂಗವಾಗಿ ಗುಣಮಟ್ಟದ ಶಿಕ್ಷಣ ಹೀರೋ ಓಫ್ ಇಂಡಿಯಾ ಮತ್ತು ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ಬಗ್ಗೆ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಜೆಸಿಐ ನೆಕ್ಕಿಲಾಡಿ ಘಟಕದ ಜೇಸಿಐ ಸಪ್ತಾಹದ ಅಂಗವಾಗಿ “ಗುಣಮಟ್ಟದ ಶಿಕ್ಷಣ- ಹೀರೋ ಆಫ್ ಇಂಡಿಯಾ” ತರಬೇತಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಸತಿ ನಿಲಯ ಉಪ್ಪಿನಂಗಡಿ ಇಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು ವಲಯ 15ರ ವ್ಯವಹಾರ ವಿಭಾಗದ ನಿರ್ದೇಶಕರಾದJFM ಚಿದಾನಂದ ಇಡ್ಯ ಇವರು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಶ್ರೀರಾಮ ಶಾಲಾ ಸಂಚಾಲಕರಾದ ಶ್ರೀ ಯು.ಜಿ ರಾಧಾ, ವಿದ್ಯಾರ್ಥಿನಿ ವಸತಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ಗೀತಾ ಜೆಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷ JFP ಶಿವಕುಮಾರ್ ಬಾರಿತ್ತಾಯ ಉಪಸ್ಥಿತರಿದ್ದರು. ವಲಯ ತರಬೇತುದಾರರಾದ ಜೇಸಿ ಪಶುಪತಿ ಶರ್ಮ ಇವರು ತರಬೇತಿ ನಡೆಸಿಕೊಟ್ಟರು.ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ JFD ವಿನೀತ್ ಶಗ್ರಿತ್ತಾಯ ಇವರು ಅಧ್ಯಕ್ಷತೆ ವಹಿಸಿದ್ದರು .ವಿದ್ಯಾರ್ಥಿ ವಸತಿ ನಿಲಯದ ಸುಮಾರು 70 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು . ದಿನದ ಎರಡನೇ ಕಾರ್ಯಕ್ರಮವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 34ನೇ ನೆಕ್ಕಿಲಾಡಿ ಇದರ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ನೆಕ್ಕಿಲಾಡಿ ಗ್ರಾಮದ ಸದಸ್ಯೆಯರಿಗೆ “ಮಹಿಳಾ ಸಬಲೀಕರಣ -ಲಿಂಗ ಸಮಾನತೆ”ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು .ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀಮತಿ ಉಷಾ ಅಂಚನ್ ಅವರು ಮಾತನಾಡಿ ಹೆಣ್ಣು ಮಕ್ಕಳನ್ನು ದೇಶದ ಆಸ್ತಿಯಾಗಿ ಬೆಳೆಸಲು ನಾವೆಲ್ಲ ಕಟಿಬದ್ಧರಾಗೋಣ,ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೆ ನಾವೆಲ್ಲ ಒಂದೇ ಎಂದು ಭಾವಿಸೋಣ ಎನ್ನುತ್ತಾ ಸರಕಾರದಿಂದ ಮಹಿಳೆಯರಿಗೆ ಇರುವ ಸವಲತ್ತುಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಚಲನಚಿತ್ರ ನಟಿ ವಲಯ ಹದಿನೈದರ ವಲಯಾಧಿಕಾರಿ ಜೇಸಿ ಸೆನೆಟರ್ ಸೌಜನ್ಯ ಹೆಗ್ಡೆ ಇವರು ಮಾತನಾಡಿ ಎಲ್ಲಿ ಹೆಂಗಸರನ್ನು ಪೂಜಿಸುತ್ತಾರೋ ಅಲ್ಲಿ ದೇವರು ಸಾನ್ನಿಧ್ಯ ನೆಲೆನಿಂತಿರುನೆಲೆ ನಿಂತಿರುತ್ತದೆ ಎಂದು ನಂಬಿರುವ ಜನರು ನಾವು ಎನ್ನುವುದರ ಮೂಲಕ ಮಹಿಳೆಯರು ಹೇಗಿರಬೇಕು ಹೇಗೆ ಸಮಾಜದಲ್ಲಿ ಬದುಕಬೇಕು ಎಂಬ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು .ಈ ಒಂದು ಕಾರ್ಯಕ್ರಮದಲ್ಲಿ ವಲಯ 15ರ ವಲಯಾಧಿಕಾರಿ ಯಾಗಿರುವ ಜೇಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷರಾಗಿರುವ ಶಿವಕುಮಾರ್ ಬಾರಿತ್ತಾಯ,ನಿಕಟ ಪೂರ್ವ ಅಧ್ಯಕ್ಷೆ ಜೆಸಿ ಅಮಿತಾ ಹರೀಶ್, ಸೇವಾ ಪ್ರತಿನಿಧಿ ಸುನಿತಾ, ಜ್ಞಾನವಿಕಾಸ ಸಭೆಯ ಕಾರ್ಯದರ್ಶಿ ವೇದಾವತಿ, ಹಾಗೂ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಶ್ರೀ ಸುಜಾತಾ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ಉಪಸ್ಥಿತರಿದ್ದರು .ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ JFD ವಿನೀತ್ ಶಗ್ರಿತ್ತಾಯ ಅವರು ಕಾರ್ಯಕ್ರಮ ನಿರ್ವಹಿಸಿದರು .

ಜಾಹೀರಾತು

ಜಾಹೀರಾತು
ಜಾಹೀರಾತು