Recent Posts

Monday, January 20, 2025
ಸುದ್ದಿ

ಕಡಬದಲ್ಲಿ ಆಟೋರಿಕ್ಷಾ ಢಿಕ್ಕಿ ಪಾದಚಾರಿ ಸಾವು – ಕಹಳೆ ನ್ಯೂಸ್

ಕಡಬ : ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಮುಂಭಾಗ ಬುಧವಾರ ರಾತ್ರಿ, ಆಟೋರಿಕ್ಷಾ ಢಿಕ್ಕಿ ಹೊಡೆದು, ಮಂಗಳೂರು ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಸಮೀಪದ ಚಂದಹಿತ್ಲು ನಿವಾಸಿ, ಅಬ್ಬಾಸ್(53) ಎಂಬವರು ಮೃತ ಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೊರ್ವರು ಗಾಯಗೂಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಬುಧವಾರದಂದು ಸಾಫ್ಟ್ ಡ್ರಿಂಕ್ ಪಿಕಪ್‍ನಲ್ಲಿ ಕಡಬಕ್ಕೆ ಆಗಮಿಸಿದ್ದು, ಪಿಕಪ್ ವಾಹನ ದುರಸ್ತಿಯಿದ್ದ ಕಾರಣ ಗ್ಯಾರೇಜ್‍ನಲ್ಲಿ ನಿಲ್ಲಿಸಿ ಊಟ ತರಲೆಂದು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಭೀರ ಗಾಯಗೊಂಡ ಅಬ್ಬಾಸ್‍ರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಕಡಬದ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.