Monday, January 20, 2025
ಸುದ್ದಿ

ಮಂಗಳೂರಿನಲ್ಲಿ ಮಳೆ ಕೊಯ್ಲು ಕಾರ್ಯಗಾರ – ಕಹಳೆ ನ್ಯೂಸ್

ಮಂಗಳೂರು : ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ವತಿಯಿಂದ ಮಳೆ ಕೊಯ್ಲು ಮಾಹಿತಿ ಕಾರ್ಯಕ್ರಮವನ್ನು, ಇತ್ತೀಚೆಗೆ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ರಾವ್ ಕಲ್ನಾವಿ ಮಾಹಿತಿ ನೀಡಿ, ಮಳೆಕೊಯ್ಲು ಇಂದಿನ ಪರಿಸ್ಥಿತಿಗೆ ಅಳವಡಿಕೆ ಅಗತ್ಯ ಭವಿಷ್ಯದಲ್ಲಿ ನೀರಿನ ಅಭಾವ ನೀಗಿಸುವಲ್ಲಿ, ಮಳೆಕೊಯ್ಲು ಪ್ರಾಮುಖ್ಯತೆ ಪಡೆಯಲಿದೆ ಎಂದು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಕಟಪೂರ್ವ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಎನ್. ಬಾಳಿಗ, ವಲಯಾಧ್ಯಕ್ಷ ಸೈಮನ್ ಲೋಬೋ, ಖಜಾಂಚಿ ನ್ಯಾನ್ಸಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಲಯನ್ ಅಧ್ಯಕ್ಷ ಎಂ. ಶೇಖರ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ವರದರಾಜ್ ಬಾಳಿಗ ವಂದಿಸಿದರು.