Monday, January 20, 2025
ಸುದ್ದಿ

ರಾಜ್ಯಕ್ಕೆ ಕಾಡಿದ್ದ ಭೀಕರ ಪ್ರವಾಹ; ನೆರೆಪರಿಹಾರವಾಗಿ ರಾಜ್ಯ ಕೇಳಿದ್ದು ಕೇವಲ 3 ಸಾವಿರ ಕೋಟಿ ಅನುದಾನ – ಕಹಳೆ ನ್ಯೂಸ್

ಕರ್ನಾಟಕದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಉಂಟಾಗಿತ್ತು. ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದಲ್ಲಿ 38,451 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.

ಮಳೆ ಮತ್ತು ಪ್ರವಾಹದಿಂದ ಕರ್ನಾಟಕದಲ್ಲಿ ಆದ ನಷ್ಟಕ್ಕೂ, ಕರ್ನಾಟಕ ಸರ್ಕಾರ ಕೇಂದ್ರಕ್ಕೆಅನುದಾನ ನೀಡಲು ಸಲ್ಲಿಸಿರುವ ಪ್ರಸ್ತಾವನೆಗೂ ಸಂಬಂಧವೇ ಇಲ್ಲವಾಗಿದೆ. ಹೌದು, 3,818 ಕೋಟಿ ಪರಿಹಾರ ನೀಡವಂತೆ ರಾಜ್ಯ ಮನವಿ ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಂದಾಯ ಸಚಿವ ಆರ್. ಅಶೋಕ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ 3,818 ಕೋಟಿ ಪರಿಹಾರವನ್ನು ಕೇಳಲಾಗಿದೆ” ಎಂದು ವಿವರಣೆ ನೀಡಿದ್ದಾರೆ.

ಪ್ರವಾಹ ಮತ್ತು ಬರ ಪರಿಹಾರ ಕಾಮಗಾರಿ ಕುರಿತು ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೆಪ್ಟೆಂಬರ್ 13ರಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದು, ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ.

ಭೀಕರ ಪ್ರವಾಹ
ಆಗಸ್ಟ್ ನಲ್ಲಿ ಸುರಿದ ಮಳೆ ಮತ್ತು ಮಹಾರಾಷ್ಟ್ರದಿಂದ ನೀರನ್ನು ಹರಿಸಿದ ಕಾರಣ ಕರ್ನಾಟಕದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. 7 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿತ್ತು. 1465 ಪರಿಹಾರ ಕೇಂದ್ರಗಳಲ್ಲಿ 4.6 ಲಕ್ಷ ಜನರು ಆಶ್ರಯ ಪಡೆದಿದ್ದರು.

ಪ್ರವಾಹದಿಂದ ನಷ್ಟ
ಪ್ರವಾಹದಿಂದಾಗಿ ರಾಜ್ಯದಲ್ಲಿ 38,451.11 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ರಾಜ್ಯ ಸರ್ಕಾರ 3,818 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಪ್ರತಿ ಕುಟುಂಬಕ್ಕೆ ತಕ್ಷಣ 25 ಸಾವಿರ ರೂ. ಬಿಡುಗಡೆ ಮಾಡಲು ಸರ್ಕಾರ ಆದೇಶ ನೀಡಿದೆ.

ನಷ್ಟದ ವಿವರಗಳು
ಮಳೆ, ಪ್ರವಾಹದಿಂದಾಗಿ 8.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ. 2,47,628 ಮನೆಗಳಿಗೆ ಹಾನಿಯಾಗಿದೆ. 21,818 ಕಿ.ಮೀ. ರಸ್ತೆಗೆ ಹಾನಿಯಾಗಿದೆ. 1550 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಹಾನಿಯಾಗಿದೆ. 10988 ಸರ್ಕಾರಿ ಕಟ್ಟಡಗಳು ಹಾನಿಗೊಂಡಿವೆ.

ಕುಟುಂಬಕ್ಕೆ 10 ಸಾವಿರ ರೂ.
ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ತಲಾ 10 ಸಾವಿರ ರೂ. ನೀಡಲಾಗುತ್ತಿದೆ. ಇದುವರೆಗೂ 2 ಲಕ್ಷ ಕುಟುಂಬಗಳಿಗೆ ಹತ್ತು ಸಾವಿರ ರೂ. ನೀಡಲಾಗಿದೆ. ದೂರು ಕೇಳಿಬಂದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ 1929 ಮಂದಿಗೆ ಪರಿಹಾರ ನೀಡುವುದನ್ನು ತಡೆ ಹಿಡಿಯಲಾಗಿದೆ.
ಎಷ್ಟು ಹಣ ಬಿಡುಗಡೆಯಾಗಿದೆ?

ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಕಂದಾಯ ಇಲಾಖೆಯಿಂದ 414 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ಸೇರಿದಂತೆ 914 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಇನ್ನೂ 380.44 ಕೋಟಿ ಹಣವಿದೆ.