ಫೋನಲ್ಲಿ ಮಾತಾಡ್ತಾ ಹಾವುಗಳ ಮೇಲೆ ಕುಳಿತ ಮಹಿಳೆ: ಏಕಕಾಲದಲ್ಲಿ ಸರಸದಲ್ಲಿ ತೊಡಗಿದ್ದ ಎರಡು ಹಾವು ಕಚ್ಚಿ ಸಾವು – ಕಹಳೆ ನ್ಯೂಸ್
ಗೋರಖ್ಪುರ: ಮೊಬೈಲ್ ಗೀಳಿಗೆ ಏನೆಲ್ಲ ಅನಾಹುತವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮಹಿಳೆಯೊಬ್ಬಳು ಫೋನಿನಲ್ಲಿ ಮಾತನಾಡುತ್ತಾ ಹಾವುಗಳ ಮೇಲೆ ಕುಳಿತುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಕ್ ಪುರದ ರಿಯಾನ್ವಿ ಗ್ರಾಮದಲ್ಲಿ ನಡೆದಿದೆ.
ಗೀತಾ ಮೃತ ಮಹಿಳೆ. ಈಕೆಯ ಗಂಡ ಥೈಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಸದಾ ಗಂಡನೊಂದಿಗೆ ಮಾತನಾಡುತ್ತಿದ್ದ ಈ ಮಹಿಳೆಗೆ ನಿನ್ನೆ ಮಧ್ಯಾಹ್ನವೂ ಗಂಡನಿಂದ ಕರೆ ಬಂದಿದೆ. ಇದೆ ಸಮಯದಲ್ಲಿ ಎರಡು ಹಾವುಗಳು ಮನೆಗೆ ಪ್ರವೇಶಿಸಿವೆ.
ಫೋನಿನಲ್ಲಿ ಮಾತನಾಡುತ್ತಾ ಮನೆಗೆ ಹಾವುಗಳು ಬಂದಿರುವುದನ್ನು ಗಮನಿಸಿಲ್ಲ. ಎರಡು ಹಾವುಗಳು ಸೀದಾ ಬೆಡ್ ರೂಮಿಗೆ ಪ್ರವೇಶಿಸಿ ಹಾಸಿಗೆಯಲ್ಲಿ ಸರಸವಾಡುತ್ತಿದ್ದವು. ಮಾತನಾಡುತ್ತ ಬೆಡ್ ರೂಮಿಗೆ ಪ್ರವೇಶಿಸಿದ ಈಕೆ ಹಾವುಗಳ ಮೇಲೆಯೆ ಕುಳಿತುಕೊಂಡಿದ್ದಾಳೆ.
ಹಾವುಗಳು ತಕ್ಷಣವೇ ಈಕೆಯನ್ನು ಕಚ್ಚಿವೆ. ಹಾಸಿಗೆಯಲ್ಲೇ ಎಚ್ಚರ ತಪ್ಪಿದ ಮಹಿಳೆಯನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ. ಕೋಪಗೊಂಡ ಮನೆಯವರು ಮನೆಗೆ ಹಿಂತುರುಗಿ ಎರಡೂ ಹಾವುಗಳನ್ನು ಕೊಂದು ಹಾಕಿದ್ದಾರೆ.