Recent Posts

Monday, January 20, 2025
ಕ್ರೀಡೆ

ಮೇರಿ ಕೋಮ್‍ಗೆ ಪದ್ಮ ವಿಭೂಷಣ, ಪಿವಿ ಸಿಂಧುಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು – ಕಹಳೆ ನ್ಯೂಸ್

ನವದೆಹಲಿ : ಆರು ಬಾರಿ ಬಾಕ್ಸರ್ ಚಾಂಪಿಯನ್ ಆಗಿರುವ ಮೇರಿ ಕೋಮ್‍ಗೆ ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಭಾರತ ರತ್ನದ ಬಳಿಕ ಅತ್ಯುನ್ನತ್ತ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿ ಶಿಫಾರಸ್ಸುಗೊಂಡಿರುವ ಮೊದಲ ಬಾರಿ ಮಹಿಳಾ ಆಟಗಾರ್ತಿ ಇವರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇರಿ ಕೋಮ್ ಜೊತೆಯಲ್ಲಿ ಇನ್ನ 9 ಮಹಿಳಾ ಆಟಗಾರ್ತಿಯರಿಗೆ ಈ ಬಾರಿ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಆಟಗಾರ್ತಿಯರ ಹೆಸರನ್ನು ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿದೆ. ವಿಶ್ವ ಚಾಂಪಿಯನ್ ಆಗಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಿಗೆ ಭಾರತದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2013ರಲ್ಲಿ ಪದ್ಮ ಭೂಷಣ ಮತ್ತು 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಮೇರಿ ಕೋಮ್ ಭಾಜನರಾಗಿದ್ದರು. ಇನ್ನು ಈ ಬಾರಿ ಏನಾದರೂ ಮೇರಿ ಕೋಮ್ ಪದ್ಮವಿಭೂಷಣ ಪ್ರಶಸ್ತಿಗೆ ಭಾಜರಾದರೇ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ನಾಲ್ಕನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

ಈ ಹಿಂದೆ 2007ರಲ್ಲಿ ಚೆಸ್ ಮಾಂತ್ರಿಕ ವಿಶ್ವನಾಥ್ ಆನಂದ್, 2008ರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, 2008 ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ ಪದ್ಮ ವಿಭೂಣ ಪ್ರಶಸ್ತಿ ಪಡೆದಿದ್ದರು.
ಇನ್ನು ಪಿವಿ ಸಿಂಧು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜರಾಗಿದ್ದರು. 2017ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧುರನ್ನು ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿತ್ತು ಆದರೆ, ಅವರು ಈ ಪುರಸ್ಕಾರಕ್ಕೆ ಭಾಜನರಾಗಲಿಲ್ಲ.