Monday, January 20, 2025
ಸುದ್ದಿ

ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಬುದ್ಧಿವಂತ ತ್ಯಾಜ್ಯ ನಿರ್ವಹಣೆ ವಿಷಯದ ಕುರಿತು ಜೆಸಿಐ ವತಿಯಿಂದ ಉಪ್ಪಿನಂಗಡಿಯಲ್ಲಿ ಮಾಹಿತಿ – ಕಹಳೆ ನ್ಯೂಸ್

ಜೆಸಿಐ ನೆಕ್ಕಿಲಾಡಿ ಘಟಕದ ಜೇಸಿ ಸಪ್ತಾಹದ 3 ದಿನದ ಅಂಗವಾಗಿ “ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಬುದ್ಧಿವಂತ ತ್ಯಾಜ್ಯ ನಿರ್ವಹಣೆ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತಿ ಎಸ್ ನಾಯ್ಕ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಆಸ್ಕರ್ ಆಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇಖಾ , ಸದಸ್ಯರುಗಳಾದ ಪ್ರಶಾಂತ್, ಅನಿ ಮಿನೇಜಸ್ ಹಾಗೂ ಇನ್ನಿತರ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಾಗರಿಕರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿಯಾಗಿ JFP ಪ್ರದೀಪ್ ಬಾಕಿಲ ಇವರು ತ್ಯಾಜ್ಯ ನಿರ್ವಹಣೆಯ ಬಗ್ಗೆ ಸ್ವಚ್ಛತೆ- ಶುಚಿತ್ವದ ಬಗ್ಗೆ ಹಾಗೂ ಒಣ ಕಸ ಹಸಿ ಕಸ ಇದರ ವಿಲೇವಾರಿಯ ಬಗ್ಗೆ ಉತ್ತಮ ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ JFD ವಿನೀತ್ ಶಗ್ರಿತ್ತಾಯ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜೆಸಿಐ ನೆಕ್ಕಿಲಾಡಿ ಘಟಕದ ನಿಕಟ ಪೂರ್ವಾಧ್ಯಕ್ಷೆ ಜೇಸಿ ಅಮಿತಾ ಹರೀಶ್, ಕಾರ್ಯದರ್ಶಿ ಜೇಸಿ ರಮೇಶ್ ಸುಭಾಷ್ ನಗರ ಉಪಸ್ಥಿತರಿದ್ದರು.