Monday, January 20, 2025
ಸುದ್ದಿ

ಬೆಳ್ತಂಗಡಿ ಮುಳಿಯದಲ್ಲಿ ಮುದ್ದುಕೃಷ್ಣ ಮತ್ತು ಬಾಲಗಣೇಶನ ಕಲರವ – ಕಹಳೆ ನ್ಯೂಸ್

ಚಿನ್ನಾಭರಣಗಳ ಮಾರಾಟದಲ್ಲಿ ಪ್ರಖ್ಯಾತ ಸಂಸ್ಥೆಯಾದ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯ ತನ್ನ ಶಾಖೆಯಲ್ಲಿ ಎರಡನೇ ವರ್ಷದ ಮುದ್ದುಕೃಷ್ಣ ಮತ್ತು ಬಾಲಗಣೇಶ ವೇಷದ ಸ್ಪರ್ಧೆಯನ್ನು 1 ವರ್ಷದಿಂದ 8 ವರ್ಷದ ಮಕ್ಕಳಿಗೆ ಹಮ್ಮಿಕೊಂಡಿತ್ತು. ಸಂಜೆ 3.30ಕ್ಕೆ ಕಾರ್ಯಕ್ರಮವನ್ನು ಶಾಖಾ ಪ್ರಬಂಧಕ ಪ್ರವೀಣ್‍ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುದ್ದುಕೃಷ್ಣ ಮತ್ತು ಬಾಲಗಣೇಶ ಸ್ಪರ್ಧೆಯಲ್ಲಿ 150 ಮಕ್ಕಳು ಭಾಗವಹಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ಸ್ಪರ್ಧಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್‍ಮೇನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕೇಶವ ಪ್ರಸಾದ್ ಮುಳಿಯರವರು ವಹಿಸಿದ್ದರು. ಹಾಗೇ ಸ್ಪರ್ಧಿಸಿದ ಎಲ್ಲಾ ಮಕ್ಕಳಿಗೂ ಹಾಗೂ ಪ್ರೋತ್ಸಾಹಿಸಿದ ಮಕ್ಕಳ ತಾಯಂದಿರಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಪದವಿ ಪೂರ್ವ ಕಾಲೇಜು, ಗೇರುಕಟ್ಟೆ ಉಪ ಪ್ರಾಂಶುಪಾಲರಾದ ಕೆ.ಜಿ. ಲಕ್ಷ್ಮಣ ಶೆಟ್ಟಿ ಆಗಮಿಸಿದ್ದರು. ಸಂಸ್ಥೆಯು ಇಂತಹ ಮನೋಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ. ಇನ್ನು ಮುಂದೆಯೂ ವ್ಯವಹಾರದೊಂದಿಗೆ ಇಂತಹ ಕಾರ್ಯಕ್ರಮ ಮೂಡಿ ಬರಲಿ ಎಂದು ಹಾರೈಸಿದರು.

ತೀರ್ಪುಗಾರರಾಗಿ ಆಗಮಿಸಿದ ಪೂರ್ಣಿಮ ಭಟ್‍ರವರು ಬೆಳ್ತಂಗಡಿ ತಾಲೂಕಿನಲ್ಲಿ ಸಂಸ್ಥೆಯು ವಿಶೇಷವಾದ ಅವಕಾಶವನ್ನು ಕಲ್ಪಿಸಿದೆ. ಹಾಗೆ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

6 ತಿಂಗಳ ಮಗುವು ಮುದ್ದುಕೃಷ್ಣ ವೇಷ ತೊಟ್ಟು ಎಲ್ಲರನ್ನೂ ಆಕರ್ಷಿಸಿತು. ಕಾರ್ಯಕ್ರಮಕ್ಕೆ ಬಂದ ಅತಿಥಿ ಅಬ್ಯಾಗತರನ್ನು ಶಾಖಾ ಪ್ರಬಂಧಕರಾದ ಪ್ರವೀಣ್ ಸ್ವಾಗತಿಸಿದರು. ನಿರೂಪಣೆಯನ್ನು ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರಾದ ಸಂಜೀವರವರು ನಿರ್ವಹಿಸಿದರು. ಸೀನಿಯರ್ ಸೇಲ್ಸ್‍ಮೇನ್ ರಮೇಶ್ ಗೌಡ ವಂದಿಸಿದರು.

ಬಾಲ ಗಣೇಶ ಸ್ಪರ್ಧೆ ವಿಜೇತರು
ಪ್ರಥಮ : ಮಯೂರ್, ಬೆಳ್ತಂಗಡಿ
ದ್ವಿತೀಯ : ಅನಾಗಾ, ಮಂಗಳೂರು
ತೃತೀಯ : ಸಂತೋಷ್.ಬಿ, ಬೆಳ್ತಂಗಡಿ

ಮುದ್ದುಕೃಷ್ಣ 1 ವರ್ಷದಿಂದ 4 ವರ್ಷ ವಿಜೇತರು
ಪ್ರಥಮ : ಅನಾಗ ಎಸ್.ಕೆ, ಮಂಗಳೂರು
ದ್ವಿತೀಯ : ಶರಾದಿ, ಪಂಡಂಗಡಿ
ತೃತೀಯ : ಆದಿತ್ರಿ ಆಚಾರ್ಯ, ಮದ್ದಡ್ಕ

ಮುದ್ದುಕೃಷ್ಣ 4 ವರ್ಷದಿಂದ 8 ವರ್ಷ ವಿಜೇತರು
ಪ್ರಥಮ: ಚಿರಂತ್ ಕೆ.ಪಿ, ಬೆಳ್ತಂಗಡಿ
ದ್ವಿತೀಯ: ತನ್ವಿ, ಉಜಿರೆ
ತೃತೀಯ: ಶ್ರೀತಾನ್, ಪುಂಜಲಕಟ್ಟೆ