Tuesday, January 21, 2025
ಸುದ್ದಿ

ಪಚ್ಚನಾಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚಿಗೆ ತ್ಯಾಜ್ಯ ನೆಲಭರ್ತಿ ಪ್ರದೇಶದಲ್ಲಿ, ಕುಸಿತ ಉಂಟಾದ ಪಚ್ಚನಾಡಿ ಮತ್ತು ಮಂದಾರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಭೇಟಿ ನೀಡಿದರು. ಮೊದಲು ಪಚ್ಚನಾಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಳಿಕ ಮಂದಾರಕ್ಕೆ ಭೇಟಿ ನೀಡಿದರು. ನಂತರ ಮಂದಾರ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ನೀಡಿರುವ ಕುಲಶೇಖರ ಹೌಸಿಂಗ್ ಬೋರ್ಡ್‍ಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಇಲ್ಲಿನ ಸಮಸ್ಯೆ ಬಗ್ಗೆ ಎರಡು ರೀತಿಯ ಯೋಜನೆ ಮಾಡಬೇಕು. ಪಚ್ಚನಾಡಿಯಲ್ಲಿ ಹಾಲಿ ಇರುವ ತ್ಯಾಜ್ಯ ಗಳನ್ನು, ವಿಲೇವಾರಿ ಮಾಡುವ ಬಗ್ಗೆ ವಿಸ್ತ್ರತ ಯೋಜನೆ ರೂಪಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂದಾರ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ಅಗತ್ಯ ಪರಿಹಾರ ಒದಗಿಸುವ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಬಳಿಕ ಈ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ತಿಳಿಸಿದರು. ಅಭಿಯಂತರ ಮಧು ಉಪಸ್ಥಿತರಿದ್ದರು. ಸರಕಾರ ನಾಲ್ವರ ಸಮಿತಿ ರಚಿಸಿದೆ.