Tuesday, January 21, 2025
ಸುದ್ದಿ

ಮಂಗಳೂರಿಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ “ವುಮೆನ್ ಆ್ಯಂಡ್ ಚೈಲ್ಡ್ ಸೆಂಟರ್’ (ಮಹಿಳಾ ಮತ್ತು ಮಕ್ಕಳ ಕೇಂದ್ರ) ಉದ್ಘಾಟನೆ ಸೆ.26ರಂದು ನಡೆಯಲಿದ್ದು, ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆ “ವಾವ್ ಮಾಮ್ ಕಾಂಟೆಸ್ಟ್’ ಅನ್ನು ಅನಾವರಣಗೂಳಿಸಲಿದ್ದು ವಿಜೇತರಿಗೆ ಶಿಲ್ಪಾ ಶೆಟ್ಟಿ “ವಾವ್ ಮಾಮ್’ ಶೀರ್ಷಿಕೆಯ ಬಹುಮಾನ ನೀಡಲಿದ್ದಾರೆ. ಈ ಸ್ಪರ್ಧೆ ಅತ್ಯಂತ ಸರಳವಾಗಿದ್ದು, ತಾಯಿಯಾಗಲಿರುವವರ ಎರಡು ಮತ್ತು ಅವರ ಕುಟುಂಬದ ಒಂದು ಫೋಟೋ ನೀಡಬೇಕು. ತಾಯಿಯಾಗುವ ನಿರೀಕ್ಷೆಯಲ್ಲಿರುವ ಮಹಿಳೆಯರು ಮಂಗಳೂರು ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ವಾಸವಾಗಿರಬೇಕು. ಯಾವುದೇ ವಸ್ತುಗಳನ್ನು ಬಳಸಿಕೂಂಡು ಚಿತ್ರಗಳನ್ನು ತೆಗೆಯಬಹುದು.ಸೆಲ್ಪಿಗಳನ್ನು ತೆಗೆಯಲು ಅವಕಾಶ ಇರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು