Wednesday, January 22, 2025
ಸುದ್ದಿ

ಧರ್ಮಸ್ಥಳ ಘಟಕಕ್ಕೆ 6 ಹೆಚ್ಚುವರಿ ಸ್ಲೀಪರ್ ಬಸ್- ಕಹಳೆ ನ್ಯೂಸ್

ಬೆಳ್ತಂಗಡಿ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಹೊರರಾಜ್ಯಗಳಿಂದಲೂ, ಅಪಾರ ಸಂಖ್ಯೆ ಭಕ್ತರು ಭೇಟಿ ನೀಡುವುದರಿಂದ ಕೆ ಎಸ್ ಆರ್ ಟಿ ಸಿಗೆ ಅತೀ ಹೆಚ್ಚು ಆದಾಯ, ತರುವ ಪ್ರವಾಸಿ ತಾಣವಾಗಿ ಕೈಹಿಡಿದಿದೆ. ಇದೀಗ ಪ್ರಯಾಣಿಕರ ಅನುಕೂಲಕ್ಕೆಂದು ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ಘಟಕಕ್ಕೆ ಹೆಚ್ಚುವರಿ 6 ಸ್ಲೀಪರ್ ಕೋಚ್ ಬಸ್‍ಗಳು ಮಂಜೂರಾಗಿದ್ದು, ದಸರಾ ಸಂದರ್ಭ ಓಡಾಟ ನಡೆಸುವ ನಿರೀಕ್ಷೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಕೆ ಎಸ್ ಆರ್ ಟಿ ಸಿ ವಿಭಾಗಕ್ಕೆ ಅತ್ಯಾಧುನಿಕ ಸೌಲಭ್ಯವುಳ್ಳ ಒಟ್ಟು 12 ಸ್ಲೀಪರ್ ಕೋಚ್ ಬಸ್‍ಗಳು ಮಂಜೂರಾಗಿದ್ದು, ಈ ಪೈಕಿ 6 ಸ್ಲೀಪರ್ ಕೋಚ್ ಬಸ್‍ಗಳು ಧರ್ಮಸ್ಥಳ ಘಟಕಕ್ಕೆ ಸೇರ್ಪಡೆಗೂಳ್ಳುವ ಮೂಲಕ ಕರ್ನಾಟಕ ಸಾರಿಗೆ ಪ್ರಯಾಣಿಕರಿಗೆ ಮತ್ತಷ್ಟು ಸೇವೆ ವಿಸ್ತರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಧರ್ಮಸ್ಥಳ ಹಾಸನ ಮಾರ್ಗವಾಗಿ ಪ್ರತಿನಿತ್ಯ ಪ್ರತಿ 15 ನಿಮಿಷಕ್ಕೊಂದರಂತೆ ಬೆಳಿಗ್ಗೆ 4.30ರಿಂದ ರಾತ್ರಿ 11ರವರೆಗೆ 72 ಬಸ್ ಓಡಾಟ ನಡೆಸುತ್ತಿದೆ. 4 ನಾನ್ ಎಸಿ ಸ್ಲೀಪರ್, 5 ರಾಜಹಂಸ, 1 ಐರಾವತ ಕ್ಲಬ್ ಕ್ಲಾಸ್ ಸೇರಿದಂತೆ 64 ಕರ್ನಾಟಕ ಸುವರ್ಣ ಸಾರಿಗೆ ಟ್ರಿಪ್‍ ದಿನನಿತ್ಯ ಪ್ರಯಾಣಿಕರ ಅನುಕೂಲಕ್ಕೆ ಲಭ್ಯವಿದೆ. ವಾರಾಂತ್ಯ ರಜಾ ದಿನ ಹಾಗೂ ಶಿವರಾತ್ರಿ, ಲಕ್ಷ ದೀಪೋತ್ಸವ ಸೇರಿದಂತೆ, ವಿಶೇಷ ಹಬ್ಬಗಳಂದು ಹೆಚ್ಚುವರಿ ಬಸ್ ನಿಯೋಜಿಸಲಾಗುತ್ತಿದೆ. ಇದರ ಜತೆಗೆ ಹೆಚ್ಚುವರಿ 6 ಸ್ಲೀಪರ್ ಬಸ್ ಸೇವೆ ಲಭ್ಯವಾಗಿರುವುದರಿಂದ ಪ್ರಯಾಣಿಕರಿಗೆ, ಮತ್ತಷ್ಟು ಅನುಕೂಲವಾಗಲಿದೆ ಎಂದು ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್ ಶಿವರಾಂ ನಾಯ್ಕ ತಿಳಿಸಿದ್ದಾರೆ.