Sunday, November 24, 2024
ಸುದ್ದಿ

ಕಾಮಗಾರಿಗಳಿಗಳು ಶೀಘ್ರವೇ ಪೂರ್ಣಗೊಳ್ಳಬೇಕು ಸಂಸದ ನಳೀನ್ ಕುಮಾರ್ ಕಟೀಲ್ ಸೂಚನೆ – ಕಹಳೆ ನ್ಯೂಸ್

ಮಂಗಳೂರು: ಹದಗೆಟ್ಟಿರುವ ರಾಷ್ಟ್ರೀಯ/ರಾಜ್ಯ ಹೆದ್ದಾರಿಗಳು, ಘಾಟಿ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಯನ್ನು ಅಕ್ಟೋಬರ್ ಅಂತ್ಯದೂಳಗೆ ಪೂರ್ಣಗೂಳಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ದ.ಕ. ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಂತ್ರಿಕ ಅಥವಾ ಆರ್ಥಿಕ ನೆಪ ಹೇಳಿ ಕಾಮಗಾರಿ ವಿಳಂಬವಾಗಬಾರದು. ಕೇಂದ್ರ ಮಾತ್ರವಲ್ಲ ರಾಜ್ಯ ಸರಕಾರದಿಂದ ಹಣಕಾಸಿನ ನೆರವು ಅವಶ್ಯವಿದ್ದರೆ ಗಮನಕ್ಕೆ ತರಬೇಕು. ಅನುದಾನ ಒದಗಿಸಲಾಗುವುದು ಎಂದರು. ಉಳಿದಂತೆ ರಸ್ತೆ ರಾ.ಹೆ. ಪ್ರಾಧಿಕಾರಕ್ಕೆ ಹಸ್ತಾಂತರಗೂಳ್ಳುವುದರಿಂದ ಕಾಮಗಾರಿಗೆ ಅನುದಾನ ಲಭ್ಯವಾಗುವುದಿಲ್ಲ. ಮಾಣಿ- ಸಂಪಾಜೆ ರಸ್ತೆಯಲ್ಲಿ ನಿರ್ವಹಣ ಕಾಮಗಾರಿಯ ಅಂದಾಜು ಪಟ್ಟಿ ಕಳುಹಿಸಲಾಗಿದೆ. ಬಿ.ಸಿ. ರೋಡ್-ಚಾರ್ಮಾಡಿ ರಸ್ತೆಯಲ್ಲೂ ರಸ್ತೆ ನಿರ್ವಹಣೆಗೆ ಅಂದಾಜು ಪಟ್ಟಿ ಸಿದ್ಧ ಪಡಿಸಲಾಗಿದೆ. ಎಲ್ಲ ರಸ್ತೆಗಳ ಕಾಮಗಾರಿಯನ್ನು ಮಳೆ ನಿಂತ ಕೂಡಲೇ ಕೈಗೆತ್ತಿಕೂಳ್ಳಲಾಗುವುದು ಎಂದರು.

ಪಂಪ್‍ವೆಲ್ ಮೇಲ್ಸೇತುವೆ ಕಾಮಗಾರಿ, ಡಿಸೆಂಬರ್‍ ಗೆ ಪೂರ್ಣಗೂಳ್ಳಲಿದೆ ಎಂದು ನವಯುಗ ಅಧಿಕಾರಿ ತಿಳಿಸಿದರು. ನವೆಂಬರ್‍ ಗೆ ಮುಗಿಸುವ ಪ್ರಯತ್ನ, ನಡೆಸಬೇಕು ಎಂದು ರಾ.ಹೆ. ಪ್ರಾಧಿಕಾರ- ಬೆಂಗಳೂರು ವಿಭಾಗದ ಮಹಾಪ್ರಬಂಧಕ ಸೂರ್ಯವಂಶಿ ಸೂಚನೆ ನೀಡಿದರು.