ಕಹಳೆ ನ್ಯೂಸ್ : ‘ ಕಾಮಾ ತುರಾಣಂ ನಾ ಭಯ… ನಾ ಲಜ್ಜೆ… ‘ ಎನ್ನುವುದು ಸತ್ಯ ಸಂಗತಿಯಾಗಿದೆ. ಕಾನೂನು ಕಾಯುವ ಪೊಲೀಸರನ್ನು ಈ ಕಾಮ ಬಿಟ್ಟಿಲ್ಲ ಎಂದರೆ ನೀವು ನಂಬಲೇ ಬೇಕು. ಹೌದು, ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಹೈದರಾಬಾದ್ನಲ್ಲಿ ನೆಡೆದಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿ ಮಾಡ್ತಿದೆ.
ಘಟನೆಯ ವಿವರ : ಭ್ರಷ್ಟಾಚಾರ ನಿಗ್ರಹ ದಳದ ಸಹಾಯಕ ಪೊಲೀಸ್ ಅಧೀಕ್ಷಕಿಯಾಗಿರುವ ಸುನಿತಾ ರೆಡ್ಡಿ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ರೆಡ್ಡಿಯವರು ಈ ಸಿನಿಮಾದ ಹೀರೋ ಮತ್ತು ಹೀರೋಯಿನ್ಗಳು. ಪಾಪ ಗಂಡ ಲಂಡನ್ನಲ್ಲಿ ತನ್ನ ಕುಟುಂಬವನ್ನು ಬಿಟ್ಟು ದುಡಿಯುತ್ತಿರುವ ಸಂದರ್ಭದಲ್ಲಿ ಈಕೆ ತನ್ನ ಸಹೋದ್ಯೋಗಿಯೊಂದಿಗೆ ಕಾಮಕೇಳಿ ನೆಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಸದ್ಯ ಲಂಡನ್ನಲ್ಲಿ ಎನ್ಆರ್ಐ ಉದ್ಯಮಿಯಾಗಿರುವ ಸುರೇಂದರ್ ರೆಡ್ಡಿ ಅವರ ಪತ್ನಿ ಸುನಿತಾ ರೆಡ್ಡಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ನಡುವೆ ಸರ್ಕಲ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ರೆಡ್ಡಿ ಅವರೊಂದಿಗೆ ತನ್ನ ಪತ್ನಿ ಸುನಿತಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಸುರೇಂದರ್ ರೆಡ್ಡಿ ಈ ಮೊದಲು ಆರೋಪಿಸಿದ್ದರೂ ಕೂಡ.
ಮಲ್ಲಿಕಾರ್ಜುನ್ ರೆಡ್ಡಿ ಅವರು ಭಾನುವಾರ ರಾತ್ರಿ ಸುನಿತಾ ಅವರನ್ನು ಭೇಟಿ ಮಾಡಲು ಅವರ ಫ್ಲಾಟ್ ಗೆ ತೆರಳಿದ್ದರು. ಈ ವೇಳೆ ಸುರೇಂದರ್ ಮತ್ತು ಆತನ ಕುಟುಂಬ ಮನೆಗೆ ಭೇಟಿ ನೀಡಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಆಕ್ಷೇಪಾರ್ಹ ಭಂಗಿಯಲ್ಲಿದ್ದರು. ಇದರಿಂದ ಆಕ್ರೋಶಗೊಂಡ ಸುರೇಂದರ್ ರೆಡ್ಡಿ ಕುಟುಂಬ ಸದಸ್ಯರನ್ನು ಮಲ್ಲಿಕಾರ್ಜುನ್ ರೆಡ್ಡಿಗೆ ಥಳಿಸಿದ್ದಾರೆ.
ಅನೈತಿಕ ಸಂಬಂಧ ಹೊಂದಿದ್ದ ಮಲ್ಲಿಕಾರ್ಜುನ್ ರೆಡ್ಡಿ ಅವರ ವಿರುದ್ಧ ಪೊಲೀಸರು ಕ್ರಿಮಿನಲ್ ಕೆಸ್ ದಾಖಲಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವರದಿ : ಕಹಳೆ ನ್ಯೂಸ್