Thursday, January 23, 2025
ಸುದ್ದಿ

Breaking News: ಬಂಟ್ವಾಳದ ವಿವಿಧ ಕಡೆಗಳಲ್ಲಿ ಅಕ್ರಮ ಮರಳು ಸಾಗಾಟದ ವಶ – ಕಹಳೆ ನ್ಯೂಸ್

ಬಂಟ್ವಾಳ: ಅಕ್ರಮ ಮರಳು ಸಾಗಾಟದ ಲಾರಿಗಳ ವಿರುದ್ದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಿತು. ನಿನ್ನೆ ಮಧ್ಯರಾತ್ರಿಯಿಂದ ಕಾರ್ಯಚರಣೆ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ ಐದು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರ ಕೈಗೆ ಹಸ್ತಾಂತರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಮರಳುಗಳನ್ನು ರಾತ್ರಿ ವೇಳೆ ಹೊರ ಜಿಲ್ಲೆಗಳಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲು ಲಾರಿಗಳಲ್ಲಿ ತುಂಬಿಸಿ ಪರವಾನಿಗೆ ರಹಿತ ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಠಾಣೆಗೆ ತಹಶೀಲ್ದಾರ್ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮದ್ಯರಾತ್ರಿ ರಾತ್ರಿ ಸುಮಾರು 1.30 ರಿಂದ ಕಾರ್ಯಚರಣೆ ಆರಂಭ ಮಾಡಿದ ಇವರ ತಂಡ ಮುಂಜಾನೆ ವೇಳೆ ವಿವಿಧ ಕಡೆಗಳಲ್ಲಿ ಐದು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಪಾಣೆಮಂಗಳೂರು ನರಹರಿ ಬಳಿಯಲ್ಲಿ ಎರಡು ಲಾರಿಗಳನ್ನು, ಮಾರ್ನಬೈಲು ಎಂಬಲ್ಲಿ ಒಂದು ಲಾರಿ, ಚೇಲೂರು ಎಂಬಲ್ಲಿ ಒಂದು ಹಾಗೂ ವಿಟ್ಲದ ಪಡಿಬಾಗಿಲು ಎಂಬಲ್ಲಿ ಒಂದು ಲಾರಿಯನ್ನು ವಶಕ್ಕೆ ಪಡೆದುಕೊಂಡ ತಹಶೀಲ್ದಾರ್ ರಶ್ಮಿ ಅವರು ಅಕ್ರಮ ಮರಳು ಸಾಗಾಟದ ಲಾರಿ ಚಾಲಕರಿಗೆ ಮುಂಜಾನೆಯ ವೇಳೆ ಬಿಸಿಮುಟ್ಟಿಸಿದ್ದಾರೆ.

ವಶಕ್ಕೆ ಪಡೆದುಕೊಂಡ ಲಾರಿಗಳನ್ನು ಬಂಟ್ವಾಳ ನಗರ ಮತ್ತು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.