Thursday, January 23, 2025
ಸುದ್ದಿ

ಮಹಿಳೆಯ ಪರ್ಸ್ ಕದ್ದು ಎಟಿಎಂ ಕಾರ್ಡ್ ಬಳಸಿ ರೂ 34000 ಹಣ ಡ್ರಾ – ಕಹಳೆ ನ್ಯೂಸ್

ಉಡುಪಿ: ಮಹಿಳೆಯೋರ್ವರು ಬಸ್ಸಿನಲ್ಲಿ ಶಿರ್ವದಿಂದ ಉಡುಪಿಗೆ ಪ್ರಯಾಣಿಸುತ್ತಿದ್ದಾಗ ಅವರ ಪರ್ಸ್ ಕದ್ದು ಅದರಲ್ಲಿದ್ದ ಎಟಿಎಮ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿದ ಘಟನೆ ಸೆ. 11 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ಮಣ್ ಪುನಾರು ನಿವಾಸಿ ಮಾಲತಿ ನಾಯಕ್ (52) ಅವರು ಪರ್ಸನ್ನು ಶಿರ್ವದಿಂದ ಬಂಟಕಲ್ ದಾರ ಮಧ್ಯೆ ಕಳವು ಮಾಡಲಾಗಿದೆ. ಪರ್ಸ್ ನಲ್ಲಿ ಕೆನರಾ ಬ್ಯಾಂಕಿನ ಎಟಿಎಂ ಕಾರ್ಡ್, ಅದರ ಪಿನ್ ನಂಬ್ರ ಇರುವ ಚೀಟಿ ಆಧಾರ್ ಕಾರ್ಡ್, ಪ್ರಧಾನ ಮಂತ್ರಿ ಆರೋಗ್ಯ ವಿಮೆ ಕಾರ್ಡ್, ಎಪಿಕ್ ಕಾರ್ಡ್, 500 ರೂ ಹಾಗೂ ಸಣ್ಣ ಉಂಗುರವಿತ್ತು. ಕದ್ದ ಎಟಿಎಮ್ ಕಾರ್ಡ್ ಬಳಸಿ ಉಡುಪಿಯಲ್ಲಿ ರೂ34000 ಡ್ರಾ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು