Friday, January 24, 2025
ಸುದ್ದಿ

ಶಂಕಿತ ಡೆಂಘ್ಯೂಗೆ ಪುತ್ತೂರಿನ ಯುವ ಉದ್ಯಮಿ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ; ಶಂಕಿತ ಡೆಂಘ್ಯೂ ಜ್ವರಕ್ಕೆ ಬಾಧಿತರಾಗಿ ಬಂಟ್ವಾಳ ತಾಲೂಕಿನ ಕೆದಿಲ ಸತ್ತಿಕಲ್ಲು ನಿವಾಸಿ, ಯುವ ಉದ್ಯಮಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ದೇಲಂಪಾಡಿಯವರಾದ, ಸದ್ಯ ಬಂಟ್ವಾಳ ತಾಲೂಕಿನ ಪೆರಮೊಗರು ನಿವಾಸಿ ಪ್ರಶಾಂತ ಸರಳಾಯ(40) ಮೃತಪಟ್ಟವರು ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಪ್ರಾರಂಭದಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು