Recent Posts

Monday, January 20, 2025
ಸುದ್ದಿ

ಮಾಜಿ ಸಚಿವ ಡಿಕೆಶಿಗೆ ರಕ್ತದೊತ್ತಡ ಹೆಚ್ಚಾದ ಹಿನ್ನಲೆ ಆಸ್ಪತ್ರೆಗೆ ಶಿಫ್ಟ್ – ಕಹಳೆ ನ್ಯೂಸ್

ನವದೆಹಲಿ : ರಕ್ತದೊತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಸದ್ಯ ಇಡಿ ವಶದಲ್ಲಿರುವ ಮಾಜಿ ಸಚಿವ, ಹಾಲಿ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ ಶಿವಕುಮಾರ‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯಲ್ಲಿರುವ ಆರ್ ಎಂ ಎಲ್ ಆಸ್ಪತ್ರೆಗೆ ಡಿಕೆಶಿ ಶಿಫ್ಟ್ ಮಾಡಲಾಗಿದೆ.

ಡಿ.ಕೆ ಶಿವಕುಮಾರ್‌ ಅವರ ಆರೋಗ್ಯದಲ್ಲಿ ಕಳೆದ ಮೂರು ನಾಲ್ಕು ದಿವಸದಿಂದ ಏರುಪೇರು ಉಂಟಾಗುತ್ತಿದ್ದು, ಅವರ ರಕ್ತದೊತ್ತಡದಲ್ಲಿ ಸಾಕಷ್ಟು ಏರುಪೇರು ಉಂಟಾಗುತ್ತಿದೆ ಎನ್ನಲಾಗಿದೆ. ಸದ್ಯ ಡಿ.ಕೆ ಶಿವಕುಮಾರ್‌ ಅವರು ಇನ್ನೂ ಮೂರು ದಿವಸಗಳ ಕಾಲ ಇಡಿ ವಶದಲ್ಲಿ ಇರಬೇಕಾಗಿದ್ದು, ಅವರ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಏರುಪೇರು ಉಂಟಾಗುತ್ತಿರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಆತಂಕಕ್ಕೆ ಈಡಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು