Recent Posts

Sunday, January 19, 2025
ಸುದ್ದಿ

ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಪ್ಲಾನ್ – ಕಹಳೆ ನ್ಯೂಸ್

ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಸಿಗರೇಟ್ ಬಟ್ಸ್, ಥರ್ಮಕೋಲ್, ಆಲ್ಕೋಹಾಲ್ ಗೆ ಬಳಸುವ ಬಾಟಲು ಸೇರಿದಂತೆ 12 ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ. ಆದರೆ ಸರ್ಕಾರ ಎಂದಿನಿಂದ ಈ ವಸ್ತುಗಳ ಮೇಲೆ ನಿಷೇಧ ಹೇರಲಿದೆ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರ ಸರಿಯಾದ ಕ್ರಮದಲ್ಲಿ ಈ ವಸ್ತುಗಳ ಮೇಲೆ ನಿಷೇಧ ಹೇರಲಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಕೇಂದ್ರಿಯ ನಿಯಂತ್ರಣ ಮಂಡಳಿಗೆ ಈಗಾಗಲೇ ಸರ್ಕಾರ ಪಟ್ಟಿ ಕಳುಹಿಸಿದೆ. ಯಾವ ಯಾವ ವಸ್ತುಗಳ ಮೇಲೆ ನಿಷೇಧ ಹೇರಬೇಕೆಂದು ಸೂಚನೆ ನೀಡಿದೆ. ಇದರಲ್ಲಿ ಒಟ್ಟು 12 ವಸ್ತುಗಳು ಸೇರಿವೆ. ರಸ್ತೆ ಬಳಿ ಹಾಕುವ ಪ್ಲಾಸ್ಟಿಕ್ ಬ್ಯಾನರ್ ಮೇಲೂ ನಿಷೇಧ ಹೇರಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಕೇಂದ್ರ ಮಾಲಿನ್ಯ ಮಂಡಳಿ 2022 ರೊಳಗೆ ಈ ಎಲ್ಲ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲಿದೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರುವಂತೆ ಪ್ರಧಾನಿ ಮೋದಿ ಪದೇ ಪದೇ ಹೇಳ್ತಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಿಗೆ ನಷ್ಟವಾಗಲಿದೆ. ಎಲ್ಲ ಯೋಜನೆಗಳನ್ನು ಮುಂದೂಡಲಾಗಿದೆ ಎಂದು ಕಂಪನಿ ಮಾಲೀಕರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು