Recent Posts

Monday, January 20, 2025
ಸುದ್ದಿ

ಎಕ್ಸಲೆಂಟ್ ಮೂಡಬಿದಿರೆ: ಖ್ಯಾತ ತೂಗು ಸೇತುವೆ ತಜ್ಞ ಡಾ| ಗಿರೀಶ್ ಭಾರಧ್ವಾಜ್ ಇವರಿಗೆ ಸನ್ಮಾನ – ಕಹಳೆ ನ್ಯೂಸ್

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು, ಕಲ್ಲಬೆಟ್ಟು, ಮೂಡಬಿದಿರೆ ಇಲ್ಲಿ ನಡೆದ ಇಂಜಿನಿಯರಿಂಗ್ ದಿನಾಚರಣೆ ಕಾರ್ಯಕ್ರಮದಲ್ಲಿ ತೂಗು ಸೇತುವೆಗಳ ಸರದಾರರಾದ ಡಾ| ಗಿರೀಶ್ ಭಾರಧ್ವಾಜ್ ಅವರನ್ನು ಸನ್ಮಾನಿಸಲಾಯಿತು.
ಇವರು 1989ರಲ್ಲಿ ತಮ್ಮ ಸ್ವಗ್ರಾಮದಲ್ಲಿ ತೂಗು ಸೇತುವೆಯನ್ನು ಬಲಿಯುವ ಮೂಲಕ ತಮ್ಮ ಸಮಾಜ ಸೇವೆಯ ಕಾಯಕವನ್ನು ಆರಂಭಿಸಿದರು. ಮುಂದೆ ಪಯಸ್ವಿನಿ, ನೇತ್ರಾವತಿ, ತುಂಗಾ, ಭದ್ರಾ, ಘಟಪ್ರಭಾ ಮುಂತಾದ ಹತ್ತು ಹಲವು ನದಿಗಳಿಗೆ ಸೇತುವೆಯನ್ನು ನಿರ್ಮಿಸಿ, ದೇಶದಾದ್ಯಂತ ಒಟ್ಟು 138 ತೂಗು ಸೇತುವೆಗಳ ನಿರ್ಮಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಗ್ರಾಮ – ನಗರಗಳನ್ನು ಬೆಸೆಯುವ ಇವರ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಸಮೇತ ಹತ್ತು ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ. ಮನುಕುಲದ ಸೇವೆಯೇ ಭಗವಂತನ ಸೇವೆಯೆಂದು ನಂಬಿರುವ ಇವರನ್ನು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಪರವಾಗಿ ಅಭಿನಂದಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಸಾಧಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯುವ ಮನಸ್ಸುಗಳು ದೇಶ ಸೇವೆಯ ಪುಣ್ಯಕಾರ್ಯದಲ್ಲಿ ತೊಡಗಬೇಕು. ತನ್ನಿಂದಾಗದು ಎಂಬ ಅಸಹಾಯಕತೆಯ ಮನೋಭಾವ ತೊರೆದು ಮುನ್ನುಗ್ಗುವ ಛಲ ಹೊಂದಿರಬೇಕು ಆಗ ಸಾಧನೆ ಸಾಧ್ಯವಾಗುತ್ತದೆ ಎಂಬ ಸಂದೇಶ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಇವರು ಮಾತನಾಡುತ್ತಾ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ ಪದವಿಗಳೊಂದಿಗೆ, ಸಂಶೋಧನಾ ಪ್ರವೃತ್ತಿ ಬೆಳೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್‍ನ ಅಧ್ಯಕ್ಷ ಲಯನ್ ರವೀಂದ್ರನಾಥ್ ಶೆಟ್ಟಿ, ಲಯನ್ ಕ್ಲಬ್‍ನ ಪದಾಧಿಕಾರಿಗಳಾದ ಕೆ.ಸಿ.ಪ್ರಭು, ದಿನೇಶ್ ನಾಯಕ್, ಭಾರತೀಯ ವಿಜ್ಞಾನ ಸಂಘದ ಅಧ್ಯಕ್ಷ ನಾರಾಯಣ ಅಯ್ಯರ್ ಮತ್ತು ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.