Recent Posts

Monday, January 20, 2025
ಸುದ್ದಿ

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಹಿಂದಿ ದಿನಾಚರಣೆ – ಕಹಳೆ ನ್ಯೂಸ್

ನಮ್ಮ ಮಾತೃ ಭಾಷೆಯಾದ ಕನ್ನಡದ ಮೇಲೆ ಗೌರವವನ್ನು ಕಡಿಮೆ ಮಾಡದೆ ಹಿಂದಿ ಭಾಷೆಯ ಬಗ್ಗೆ ನಮ್ಮ ಪ್ರೇಮವನ್ನು ಹೆಚ್ಚಿಸಿದಾಗ ದೇಶದ ಉನ್ನತಿಯಾಗುತ್ತದೆ ಎಂದು ಡಾ ರೂಪ ಭಟ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿ ದಿನಾಚರಣೆಯನ್ನು ಉದ್ಛಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ಸರಕಾರವು 1949 ರಲ್ಲಿ ರಾಜ ಭಾಷೆಯಾಗಿ ಅಂಗೀಕಾರ ಮಾಡಿತು. ಹಿಂದಿ ಸಂಪರ್ಕ ಭಾಷೆಯಾಗಿಯೂ ಬಳಸಲ್ಪಡುತ್ತದೆ. ಇಂಗ್ಲೀಷ್ ಭಾಷೆ ಪಟ್ಟಣಗಳಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಆದರೆ ಹಳ್ಳಿಗಳಲ್ಲಿ ಜನರ ಸಂಪರ್ಕ ಭಾಷೆಯಾಗಿ ಹಿಂದಿ ಇರುವುದರಿಂದ ಹಿಂದಿ ಭಾಷೆಯನ್ನು ಅದಷ್ಟು ಮಾತನಾಡಿ ಬೆಳೆಸುವ ಅವಶ್ಯಕತೆ ಇದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮಾತನಾಡುತ್ತಾ, ರಾಷ್ಟ್ರ ಮಟ್ಟದಲ್ಲಿ ಯಾವುದೇ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಹಿಂದಿ ಭಾಷೆಯ ಅರಿವಿನ ಅಗತ್ಯವಿದೆ. ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಹೋದಾಗ ಹಿಂದಿ ಭಾಷೆಯೇ ನಮ್ಮ ನೆರವಿಗೆ ಬರುತ್ತದೆ. ಹಾಗಾಗಿ ಹಿಂದಿ ಭಾಷೆಯನ್ನು ಕಲಿಯುವ ಅಗತ್ಯವಿದೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಜೇಸ್ನಾ ಫಿರ್ದೋಸ್ ಸ್ವಾಗತಿಸಿದರು. ದುಶ್ಯಂತು ಕುಮಾರ್ ದೇಶ ಭಕ್ತಿ ಗಾಯನ ಮಾಡಿದರು. ವೈಷ್ಣವಿ ಪೈ ಶಾಯರಿ ವಾಚಿಸಿದರು. ವಹಿದಾ ಎ ವಂದಿಸಿದರು. ಜೆನಿಸಾ ಡಿ ಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.