Friday, January 24, 2025
ಸುದ್ದಿ

ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ ‘ಕದಂಬೋತ್ಸವ’ದ ಸಮಾರೋಪ: ಇಂದು ಸಂಜೆ ಕಡಬದಲ್ಲಿ ‘ಡ್ಯಾನ್ಸ್ ಬ್ಲಾಸ್ಟ್’ ಅದ್ಭುತ ನೃತ್ಯ ಪ್ರದರ್ಶನ – ಕಹಳೆ ನ್ಯೂಸ್

ಕಡಬ : ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕಳೆದ ಒಂದು ವಾರಗಳಿಂದ ನಡೆಯುತ್ತಿರುವ ಜೇಸಿ ಸಪ್ತಾಹ ‘ಕದಂಬೋತ್ಸವ’ ದ ಸಮಾರೋಪ ಸಮಾರಂಭವು ಇಂದು ಕಡಬದಲ್ಲಿ ನಡೆಯಲಿದೆ. ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಸಭಾ ಭವನದಲ್ಲಿ ಭಾನುವಾರ ಸಂಜೆ 6.೦೦ ರಿಂದ ಸಪ್ತಾಹದ ಸಭಾ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಈ ಟಿವಿ ಹಾಗೂ ಝೀ ಕನ್ನಡ ವಾಹಿನಿಗಳಲ್ಲಿ ಪ್ರದರ್ಶನ ನೀಡಿರುವ ನೃತ್ಯಪಟುಗಳಿಂದ ‘ಡ್ಯಾನ್ಸ್ ಬ್ಲಾಸ್ಟ್’ ಅದ್ಭುತ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಜೇಸಿಐ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು