Thursday, January 23, 2025
ಸುದ್ದಿ

ಬೆಳಗಾವಿ ಜಿಲ್ಲಾ ಶಾಸಕರ ಸಭೆಗೆ ಉಮೇಶ್ ಕತ್ತಿ ಗೈರು – ಕಹಳೆ ನ್ಯೂಸ್

ಸಚಿವ ಸ್ಥಾನ ವಂಚಿತ ಉಮೇಶ್‌ಕತ್ತಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿನ್ನೆ ಕರೆದಿದ್ದ, ಬೆಳಗಾವಿ ಜಿಲ್ಲಾ ಶಾಸಕರ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ನಿರೀಕ್ಷೆ ಹೊಂದಿದ್ದ ಉಮೇಶ್ ಕತ್ತಿ, ತೀವ್ರ ಬೇಸರಗೂಂಡಿದ್ದಾರೆಂದು ಹೇಳಲಾಗಿದೆ. ಆದರೆ ಶ್ರೀಮಂತ ಪಾಟೀಲ್ ಉಮೇಶ್ ಕತ್ತಿ ಅವರನ್ನು ಸಭೆಗೆ ಕರೆತರಲು ಸಾಕಷ್ಟು ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಶಾಸಕರಾದ ಶಶಿಕಲಾ ಜೂಲ್ಲೆ, ಅನಿಲ್ ಬೆನಕೆ, ಅಭಯ ಪಾಟೀಲ್, ಯಾದವಾಡ , ಮಹಾಂತೇಶ್, ಪಿ.ರಾಜೀವ್, ಸೇರಿ ಉಳಿದ ಶಾಸಕರು ಮಾತ್ರ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾಗಲೂ ಉಮೇಶ್ ಕತ್ತಿ ಗೈರಾಗಿದ್ದರು. ಹೀಗಾಗಿ, ಅವರ ಅಸಮಾಧಾನ ಮುಂದುವರಿದಿದೆ ಎಂದು ಹೇಳಲಾಗಿದೆ. ಬಾಲಚಂದ್ರ ಜಾರಕಿಹೊಳಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆಗೆ ಗೈರಾಗಿದ್ದರಾದರೂ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದ ಕಾರಣ, ಬಾಲಚಂದ್ರ ಜಾರಕಿಹೊಳಿ ಅನ್ಯ ಕಾರ್ಯನಿಮಿತ್ತ ಸಭೆಗೆ ಬಂದಿರಲಿಲ್ಲ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಯಾರಿಗೂ ಯಾವುದೇ ರೀತಿಯ ಅಸಮಾಧಾನವಿಲ್ಲ. ಉಮೇಶ್ ಕತ್ತಿ ಅವರು ಮನೆಗೆ ಬಂದು ಮಾತನಾಡಿ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.