Thursday, January 23, 2025
ಸುದ್ದಿ

ಮತ್ತೊಮ್ಮೆ ಯುದ್ದನ್ಮಾದ ಹೇಳಿಕೆ ಕೂಟ್ಟ ಇಮ್ರಾನ್ ಖಾನ್ – ಕಹಳೆ ನ್ಯೂಸ್

ಇಸ್ಲಮಾಬಾದ್: ಪದೇ ಪದೇ ಯುದ್ಧದ ಬಗ್ಗೆ ಮಾತನಾಡುತ್ತಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತೆ ಯುದ್ದೋನ್ಮಾದದಲ್ಲಿದ್ದಾರೆ. ಅದರಲ್ಲೂ ಪರಮಾಣು ಯುದ್ಧದ ಬಗ್ಗೆ ತೀವ್ರ ಆಸಕ್ತಿ ತೋರ್ಪಡಿಸುತ್ತಿರುವ ಇಮ್ರಾನ್, ಭಾರತದೆದುರು ಯುದ್ಧವಾದರೆ ಪಾಕಿಸ್ಥಾನ ಬಹುಶಃ ಸೋಲಬಹುದು. ಆದರೆ ಭಾರತ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಜಮ್ಮು ಕಾಶ್ಮೀರದಲ್ಲಿ ಅನುಚ್ಛೇಧ 370ನ್ನು ರದ್ದುಗೊಳಿಸಿರುವುದು ಭಾರತದ ‘ಅಕ್ರಮ ಸ್ವಾಧೀನ’ ಎಂದು ಬಣ್ಣಿಸಿದ್ದಾರೆ. ಭಾರತದ ವಿರುದ್ಧ ಪರಮಾಣು ಯುದ್ಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, “ ನಾನು ಹಿಂದೆ ಏನು ಹೇಳಿದ್ದೆ ಅದೇ ಮಾತಿಗೆ ಬದ್ಧನಾಗಿದ್ದೇನೆ. ಅದರಲ್ಲಿ ಯಾವ ಸಂದೇಹವೂ ಇಲ್ಲ. ನಾವು ಮೊದಲು ಪರಮಾಣು ಅಸ್ತ್ರ ಉಪಯೋಗಿಸುವುದಿಲ್ಲ. ನನಗೆ ಯುದ್ದದಲ್ಲಿ ಆಸಕ್ತಿ ಇಲ್ಲ. ಎರಡು ಪರಮಾಣು ಬಾಂಬ್ ಹೊಂದಿದ ದೇಶಗಳು ಸಾಂಪ್ರದಾಯಿಕ ಯುದ್ಧ ಆರಂಭಿಸಿದರೂ, ಅದು ಅಣು ಯುದ್ಧದದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ವೇಳೆ ಯುದ್ಧದಲ್ಲಿ ಪಾಕ್ ಸೋಲುವ ಹಂತಕ್ಕೆ ಬಂದರೆ ಆಗ ನಮ್ಮೆದುರು ಎರಡು ಸಾಧ್ಯತೆಗಳಿರುತ್ತದೆ. ಒಂದು ಶರಣಾಗಬೇಕು ಅಥವಾ ಕೊನೆಯ ಉಸಿರಿರುವರೆಗೆ ಹೋರಾಡಬೇಕು. ನಾವು ಎರಡನೇ ಸಾಧ್ಯತೆಯನ್ನೇ ಪರಿಗಣಿಸುತ್ತೇವೆ. ಅಣ್ವಸ್ತ್ರ ಹೊಂದಿದ ದೇಶ ಸಾಯುವ ಹಂತದಲ್ಲಿ ಹೋರಾಟ ನಡೆಸುವಾಗ ಖಂಡಿತ ಸುಮ್ಮನಿರುವುದಿಲ್ಲ ಎಂದು ಇಮ್ರಾನ್ ಅಣು ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.