Wednesday, January 22, 2025
ಸುದ್ದಿ

ಬೆಳ್ತಂಗಡಿ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಣೆ -ಕಹಳೆ ನ್ಯೂಸ್

ಬೆಳ್ತಂಗಡಿ: ಪ್ರವಾಹದಿಂದ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳು ತತ್ತರಿಸಿದ್ದವು. ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಡುವ ದೃಷ್ಟಿಯಿಂದ ರಾಜ್ಯದಲ್ಲಿ, ನೆಲೆ ಕಳೆದುಕೂಂಡಿರುವ 191 ಸಂತ್ರಸ್ತರ ಪೈಕಿ ಬೆಳ್ತಂಗಡಿಯ 61 ಮಂದಿ ಸಂತ್ರಸ್ತರಿಗೆ 2ನೇ ಹಂತದಲ್ಲಿ, 37 ಲಕ್ಷ ರೂ. ನೇರ ಖಾತೆಗೆ ರಾಜ್ಯ ಸರಕಾರ ಹಸ್ತಾಂತರಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಪ್ರವಾಹ ಭೀಕರತೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ, ಬೆಳ್ತಂಗಡಿಯ ಪರಿಸ್ಥಿತಿ ಅವಲೋಕಿಸಿ ರಾಜ್ಯಕ್ಕೆ ಅನ್ವಯವಾಗುವಂತೆ 2 ಸಾವಿರ ಕೋಟಿ ರೂ. ನೆರೆ ಪರಿಹಾರ ಘೋಷಿಸಿದ್ದರು. ಮೊದಲ ಹಂತವಾಗಿ ತಾಲೂಕಿನ 267 ಮಂದಿ ಸಂತ್ರಸ್ತ ಕುಟುಂಬಗಳಿಗೆ 10,000 ವಿತರಿಸಲಾಗಿದೆ. ಜತೆಗೆ ದಾನಿಗಳಿಂದ ದಿನಬಳಕೆ ವಸ್ತು, ಅಕ್ಕಿ ಸಹಿತ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತ ಹಾಗೂ ಶಾಸಕರ ಮುತುವರ್ಜಿಯಿಂದ ವಿತರಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ತಾಲೂಕು ಆಡಳಿತಕ್ಕೆ 860 ಅರ್ಜಿಗಳು ಬಂದಿವೆ. ಸುಮಾರು 270 ಹೆಕ್ಟೇರ್ ಕೃಷಿ ಭೂಮಿ ಪ್ರದೇಶ ಹಾನಿ ಅಂದಾಜಿಸಲಾಗಿದ್ದು, ಕೃಷಿ ಅಧಿಕಾರಿಗಳಿಂದ ಸಮೀಕ್ಷೆ ಕಾರ್ಯ ಸಾಗಿದೆ. ಆದರೆ ಸಮೀಕ್ಷೆಗೆ ಇಲಾಖೆಯಲ್ಲಿ ಅಧಿಕಾರಿಗಳ ಹೆಚ್ಚಿನ ಸಿಬಂದಿ ನೇಮಿಸಿ ಶೀಘ್ರ ಕೃಷಿ ಹಾನಿ ಪರಿಹಾರ ವಿತರಣೆಯಾಗಬೇಕಿದೆ. ಸಂಪೂರ್ಣ ಮನೆ ಕಳೆದು ಕೊಂಡವರಿಗೆ 1 ಲಕ್ಷ ರೂ. ಭಾಗಶಃ ಮನೆ ಕಳೆದುಕೊಂಡವರಿಗೆ 25 ಸಾವಿರ ರೂ., ತೀವ್ರ ಮನೆ ಹಾನಿಯಾದವರಿಗೆ 25 ಸಾವಿರ ರೂ. ಬಿಡುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು