Tuesday, January 21, 2025
ಸುದ್ದಿ

ಬೆಳ್ತಂಗಡಿಯಲ್ಲಿ ಬಡವರ ಮನೆ ನಿರ್ಮಾಣಕ್ಕೆ ಮರಳಿನ ಸಮಸ್ಯೆ- ಕಹಳೆ ನ್ಯೂಸ್

ಬಡವರಿಗೆ ಸರಕಾರದಿಂದ ಮನೆ ಮಂಜೂರಾಗಿದ್ದರೂ, ಮರಳಿನ ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಅಸಾಧ್ಯವಾಗಿದೆ. ಇದರಿಂದಾಗಿ ಗ್ರಾಮ ಮಟ್ಟದಲ್ಲಿ ನದಿಗಳಿಂದ ಮರಳು ತೆಗೆಯಲು ಕಾನೂನು ರೀತಿಯಲ್ಲಿ ಅವಕಾಶ ನೀಡಬೇಕು ಎಂದು ಬೆಳ್ತಂಗಡಿಯಲ್ಲಿ ಮನವಿ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅಧ್ಯಕ್ಷತೆಯಲ್ಲಿ, ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಮಟ್ಟದ ದಲಿತರ ಕೊಂದು ಕೊರತೆ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಲಾಯಿತು. ನೆರೆಯಿಂದಾಗಿ ನದಿಗಳಲ್ಲಿ ಶೇ. 60ರಷ್ಟು ಮರಳು ಹಾಗೂ ಚರಳು ತುಂಬಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮಳೆ ಬಂದರೆ ಇದಕ್ಕಿಂತಲೂ, ನೆರೆ ಜಾಸ್ತಿಯಾಗಿ ಆಸ್ತಿ-ಪಾಸ್ತಿಗಳಿಗೆ ನಷ್ಟ ಸಂಭವಿಸಬಹುದು. ಈಗ ನದಿಗಳಲ್ಲಿ ತುಂಬಿ ಕೊಂಡಿರುವ ಮರಳು ಹಾಗೂ ಚರಳನ್ನು ತೆರವು ಮಾಡುವ ಕೆಲಸ ಜಿಲ್ಲಾಡಳಿತದಿಂದ ಆಗಬೇಕಾಗಿದೆ ಎಂದರು. ಈ ಬಗ್ಗೆ ಜಿಲ್ಲಾಡಳಿತದೂಂದಿಗೆ ಚರ್ಚಿಸ ಲಾಗುವುದು ಎಂದು ಎಸ್‍ಪಿ ತಿಳಿಸಿದರು.