Monday, January 20, 2025
ಸುದ್ದಿ

ಕುಂಡಡ್ಕದಲ್ಲಿ ಗಣೇಶೋತ್ಸವ ಸಮಾರಂಭದ ಹತ್ತರ ಉತ್ತರಿ ಲೆಕ್ಕ ಪತ್ರ ಮಂಡನೆ- ಕಹಳೆ ನ್ಯೂಸ್

ಬೆಳ್ಳಾರೆ : ಸಂಘಟನೆಗಳು ಫಲಾಪೇಕ್ಷ ರಹಿತ ಸೇವೆಯೊಂದಿಗೆ ಪಾರದರ್ಶಕ ವ್ಯವಹಾರ, ಚಟುವಟಿಕೆಗಳಿಗೆ ಒತ್ತು ನೀಡಿದಾಗ ಸಮಾಜದ ಸರ್ವರ ವಿಶ್ವಾಸ ಉಳಿಸಿಕೊಳ್ಳಲು, ಸಾಧ್ಯವಾಗುತ್ತದೆ ಎಂದು ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಕ್ಕೂರು ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ದಶಮಾನೋತ್ಸವ ವತಿಯಿಂದ ಸೆ.15 ರಂದು ಮುಕ್ಕೂರಿನಲ್ಲಿ ನಡೆದ, ಹತ್ತರ ಹುತ್ತರಿ ಸಮಾರಂಭದ ಲೆಕ್ಕಪತ್ರ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಳೆದ ಹತ್ತು ವರ್ಷದಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ಗಣೇಶೋತ್ಸವ ಸಮಿತಿಯ ಹತ್ತರ ಹುತ್ತರಿ ಅಭೂತಪೂರ್ವ ಯಶಸ್ಸು ಕಂಡಿದೆ. ಸಮಾರಂಭದ ಮುಗಿದ ಕೆಲ ದಿನಗಳಲ್ಲಿ ಖರ್ಚು ಜಮೆ ವೆಚ್ಚದ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದಿಡುವ ಮೂಲಕ ಮಾದರಿ ಹೆಜ್ಜೆ ಇಟ್ಟಿದೆ ಎಂದ ಅವರು, ಹತ್ತರ ಹುತ್ತರಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಒಳ್ಳೆಯ ಉದ್ದೇಶದ ಪರಿಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ ಎನ್ನುವುದಕ್ಕೆ ಹತ್ತರ ಹುತ್ತರಿ ಸಮಾರಂಭದ ಯಶಸ್ಸು ಉದಾಹರಣೆ. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಊರ-ಪರವೂರಿನ ಮೆಚ್ಚುಗೆಗೆ ಪಾತ್ರವಾಗಿದೆ. ಬೇಧವಿಲ್ಲದೆ ಒಗ್ಗಟ್ಟಿನ ನಿಲುವಿನೊಂದಿಗೆ ಯೋಜನೆ, ಯೋಚನೆ ಅನುಷ್ಠಾನಿಸುವ ಗಣೇಶೋತ್ಸವ ಸಮಿತಿ ಸಮಾಜಕ್ಕೆ ಮಾದರಿ ಹೆಜ್ಜೆ ಇಟ್ಟಿದೆ ಎಂದರು.ಪ್ರಗತಿಪರ ಕೃಷಿಕ ಎನ್.ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಇಂತಹ ಕಾರ್ಯಕ್ರಮಗಳು ಊರಿಗೂ ಪೂರಕ. ಎಲ್ಲರೂ ಜತೆಗೂಡಿ ದಶ ಸಂಭ್ರಮವನ್ನು ವ್ಯವಸ್ಥಿತವಾಗಿ ನಡೆಸಿರುವುದು ಶ್ಲಾಘನೀಯ ಎಂದರು.

ಸಭೆಯಲ್ಲಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗುಡ್ಡಪ್ಪ ಗೌಡ ಅಡ್ಯತಕಂಡ, ಲಿಂಗಪ್ಪ ಗೌಡ ನೀರ್ಕಜೆ, ಸತ್ಯಪ್ರಭಾ, ಸಾವಿತ್ರಿ ಕೆ, ನಾರಾಯಣ ಗೌಡ ಅಡ್ಯತಕಂಡ, ರಮೇಶ್ ಕಾನಾವು, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರವೀಂದ್ರ ಅನವುಗುಂಡಿ, ರವಿ ಕುಂಡಡ್ಕ, ರಕ್ಷಿತ್ ಗೌಡ ಒರುಂಕು, ವೆಂಕಟರಮಣ ಕುಂಡಡ್ಕ ಮೊದಲಾದವರಿದ್ದರು.ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಪ್ರಸ್ತಾವನೆಗೈದರು. ಕೋಶಾಧಿಕಾರಿ ರಾಮಚಂದ್ರ ಚೆನ್ನಾವರ ಲೆಕ್ಕಪತ್ರ ವರದಿ ಮಂಡಿಸಿದರು. ಕಿರಣ್ ಪ್ರಸಾದ್ ಕೆ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಎನ್.ಕೆ.ವಂದಿಸಿದರು. ಶಿಕ್ಷಕ ಶಶಿಕುಮಾರ್ ಬಿ.ಎನ್. ನಿರೂಪಿಸಿದರು.