Monday, January 20, 2025
ಸುದ್ದಿ

ಪ್ಲಾಸ್ಟಿಕ್ ಕವರ್‍ ನಲ್ಲಿ ನವಜಾತ ಶಿಶು ಪತ್ತೆ – ಕಹಳೆ ನ್ಯೂಸ್

ಮೈಸೂರು: ಪ್ಲಾಸ್ಟಿಕ್ ಕವರ್‍ ನಲ್ಲಿ ಸುತ್ತಿ ನವಜಾತ ಹೆಣ್ಣು ಶಿಶುವೊಂದನ್ನು ರಸ್ತೆಯಲ್ಲಿ, ಬಿಸಾಡಿ ಹೋದ ಅಮಾನವೀಯ ಘಟನೆ ಮೈಸೂರು ನಗರದ ಶ್ರೀರಾಮಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮುಖ್ಯರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್‍ನಲ್ಲಿ ಸುತ್ತಿ ಮಗುವನ್ನು ಬಿಸಾಡಿ ಹೋಗಿದ್ದು, ಬೆಳಿಗಿನ ಜಾವ ದಾರಿಹೋಕರು ಸಾಗುತ್ತಿದ್ದಾಗ ಮಾರ್ಗದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಪರಿಶೀಲಿಸಿದಾಗ ನವಜಾತ ಶಿಶುವಿರುವುದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುವೆಂಪುನಗರ ಪೊಲೀಸ್ ಠಾಣೆಗೆ ಮಾಹಿತಿ ಮಾಹಿತಿ ನೀಡಿದ್ದು, ಧಪೇದಾರ್ ಸುಂದರಿ ಅವರು ಸ್ಥಳಕ್ಕೆ ತೆರಳಿ ಶಿಶುವನ್ನು ಪರೀಕ್ಷಿಸಿ ಚೆಲುವಾಂಬಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ಶಿಶು ಆರೋಗ್ಯವಾಗಿದ್ದು, ಚೆಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಇರಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು