ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ವತಿಯಿಂದ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಿಂಗಳ ಸಭೆ ನಡೆಯಿತು.
ಪುತ್ತೂರು ತಾಲೂಕು ಅಧ್ಯಕ್ಷ ಬಿ. ಕೆ. ಅಣ್ಣಪ್ಪ ಕಾರೆಕ್ಕಾಡು, ಮಂಗಳೂರು ತಾಲೂಕು ಅಧ್ಯಕ್ಷ ಶ್ರೀಧರ್ ಮಂಜನಾಡಿ, ಮಹಿಳಾ ಘಟಕದ ಜಿಲ್ಲಾಧ್ಯೆಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ , ಗೌರವ ಸಲಹೆಗಾರ ಮೋಹನ್ ದಾಸ್. ಯು. ವಿಟ್ಲ ಮತ್ತು ಮಕ್ಕಳ ವಿದ್ಯಾರ್ಥಿ ಘಟಕದ ಸಂಚಾಲಕಿ ಸುಪ್ರೀತಾ ಪಿಲಿಂಜ, ಗೋವಿಂದ ನಾಯ್ಕ ಕುಂಡಡ್ಕ, ಮಧುಶ್ರೀ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಪ್ರತೀ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಕ್ಕಳನ್ನು ಒಟ್ಟು ಸೇರಿಸಿ ಅವರಿಗೆ ಶಿಕ್ಷಣದ ಬಗ್ಗೆ ಮಾಹಿತಿ ತಿಳಿಸಿ, ಅಂಬೇಡ್ಕರ್ ರವರ ಅವರ ಚಿಂತನೆ, ತತ್ವ ಸಿದ್ಧಾಂತಗಳನ್ನು ಮತ್ತು ವಿಚಾರ ಧಾರೆಗಳನ್ನೂ ಮನವರಿಕೆ ಮಾಡುತ್ತಾ ಈಗಿಂದಲೇ ಮಕ್ಕಳನ್ನು ಮುಂದಿನ ಪೀಳಿಗೆಗೆ ಜಾಗೃತಗೊಳಿಸುವಂತೆ ಜಿಲ್ಲಾಧ್ಯಕ್ಷರಾದ ಬಿ. ಕೆ.ಸೇಸಪ್ಪ ಬೆದ್ರಕ್ಕಾಡು ಕರೆನೀಡಿದರು.
ಮೂರು ತಿಂಗಳಿಗೊಮ್ಮೆ ಮಕ್ಕಳಿಗೆ ನೀಡುವ ಶೈಕ್ಷಣಿಕ ಪಾಠದ ಬಗ್ಗೆ ಮತ್ತು ಇತರ ಮಾಹಿತಿಗಳನ್ನು ತಿಳಿದುಕೊಳ್ಳಲು ಹೆತ್ತವರು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಸಾದ್ ಅನಂತಾಡಿ ವಂದಿಸಿದರು.